ಮೆಹುಲ್ ಚೋಕ್ಸಿಗೆ ಮುಂಬೈನ ಆರ್ಥರ್ ರೋಡ್‌ನಲ್ಲಿ ಸಿದ್ಧವಾಗಿರೋ ಜೈಲು ಕೋಣೆ ಹೇಗಿದೆ ಗೊತ್ತಾ?

Public TV
2 Min Read

– ಟಿವಿ, ವೆಸ್ಟರ್ನ್ ಟಾಯ್ಲೆಟ್ ಸೇರಿ ಹಲವು ಹೈಟೆಕ್‌ ಸೌಲಭ್ಯ

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ (PNB Loan Scam) ಪ್ರಮುಖ ಆರೋಪಿಯಾದ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ (Mehul Choksi)ಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ಕೋರ್ಟ್ ಸಮ್ಮತಿಸಿದೆ. ಭಾರತಕ್ಕೆ ಹಸ್ತಾಂತರಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ ಎಂದು ಆಂಟ್ವೆರ್ಪ್ ಕೋರ್ಟ್ ಹೇಳಿದೆ.

ಇನ್ನು ಭಾರತಕ್ಕ ಹಸ್ತಾಂತರ ಬೆನ್ನಲ್ಲೇ ಮೆಹುಲ್ ಚೋಕ್ಸಿಗಾಗಿ ಮುಂಬೈನ ಆರ್ಥರ್ ರೋಡ್ ಜೈಲು (Mumbai’s Arthur Road Jail) ಸಜ್ಜಾಗಿದೆ. ಭಾರತಕ್ಕೆ ಬಂದ್ಮೇಲೆ ಆತನನ್ನ ಬ್ಯಾರಕ್ ನಂ.12ರಲ್ಲಿ ಇರಿಸಲಾಗುತ್ತೆ. ಅದರ ಒಳಾಂಗಣ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ: PNB Fraud Case | ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಅರೆಸ್ಟ್‌

500 ಚದರ ಅಡಿ ಬ್ಯಾರಕ್ ಇದಾಗಿದ್ದು, 2 ಕೋಣೆಗಳಿವೆ. ಟಿವಿ, ವೆಸ್ಟರ್ನ್ ಟಾಯ್ಲೆಟ್, ವಾಶ್‌ರೂಮ್, ಪ್ಯಾಸೇಜ್, ಸೊಳ್ಳೆ ಪರದೆ, ಟ್ಯೂಬ್‌ಲೈಟ್, ಸೀಲಿಂಗ್ ಫ್ಯಾನ್ ಸೌಲಭ್ಯಗಳೊಂದಿಗೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ.

ಇನ್ನೂ ವೈದ್ಯಕೀಯ ತಪಾಸಣೆ, ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಹೊರತುಪಡಿಸಿ ಉಳಿದ ಸಮಯದಲ್ಲಿ ಚೋಕ್ಸಿ ಜೈಲಿನ ಒಳಾಂಗಣದಲ್ಲೇ ಇರಲಿದ್ದಾರೆ. ಸದ್ಯ ಚೋಕ್ಸಿ ಬ್ಲಡ್‌ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್‌ ಮೋದಿ ಆಸ್ತಿ ಹರಾಜು

13 ಸಾವಿರ ಕೋಟಿ ವಂಚನೆ
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ನಿಂದ 13,850 ಕೋಟಿ ರೂ. ಸಾಲ ಪಡೆದಿದ್ದ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ, ಸಾಲ ಮರುಪಾವತಿಸದೇ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಇವರಿಬ್ಬರಿಗಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹುಡುಕಾಟ ನಡೆಸಿತ್ತು. 2018ರಲ್ಲಿ ದೇಶದಿಂದ ಪರಾರಿಯಾಗಿದ್ದ ಚೋಕ್ಸಿ, ಮೊದಲು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು. ಬಳಿಕ ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಚೋಕ್ಸಿಯನ್ನ ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು.

1,271 ಕೋಟಿ ಮೌಲ್ಯದ ಆಸ್ತಿ ಜಪ್ತಿ
2018 ರಲ್ಲಿ ಇಡಿ 1,217 ಕೋಟಿ ಮೌಲ್ಯದ ಚೋಕ್ಸಿಯ 41 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಅವರ 2 ಫ್ಲಾಟ್‌ಗಳು, ಕೋಲ್ಕತ್ತಾದ ಮಾಲ್, ಮುಂಬೈ-ಗೋವಾ ಹೆದ್ದಾರಿಯಲ್ಲಿ 27 ಎಕ್ರೆ ಭೂಮಿ, ತಮಿಳುನಾಡಿನಲ್ಲಿ 101 ಎಕರೆ ಜಮೀನು, ಆಂಧ್ರಪ್ರದೇಶದ ನಾಸಿಕ್, ನಾಗ್ಪುರದಲ್ಲಿನ ಜಮೀನುಗಳು, ಅಲ್ಲಾಬಾಗ್‌ನಲ್ಲಿರುವ 2 ಬಂಗಲೆಗಳು ಮತ್ತು ಸೂರತ್‌ನಲ್ಲಿರುವ ಕಚೇರಿಯನ್ನು ಇಡಿ ವಶಪಡಿಸಿಕೊಂಡಿತ್ತು. ಈವರೆಗೆ ಇಡಿ ಚೋಕ್ಸಿ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಿದೆ. 2019ರಲ್ಲಿ ಚೋಕ್ಸಿ ದೇಶದಿಂದ ಪರಾರಿಯಾಗಿದ್ದಾನೆ ಎಂದು ಹೇಳಿತ್ತು.

Share This Article