ಮೈಸೂರು: ಕಾಲುವೆಗೆ ಈಜಲು ಇಳಿದಿದ್ದ ಮೂರು ಬಾಲಕರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ಅಯಾನ್ (16), ಆಜಾನ್ (13), ಹಾಗೂ ಶಕಿಲ್ (14) ಎಂದು ಗುರುತಿಸಲಾಗಿದೆ. ಸಾಲಿಗ್ರಾಮದ ಭಾಸ್ಕರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಅಯಾನ್ ಹಾಗೂ ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಗಂಡನ ಮನೆಯಲ್ಲಿ ಕಿರುಕುಳ ಆರೋಪ – ನದಿಗೆ ಹಾರಿ ಪ್ರಾಣಬಿಟ್ಟ ತಾಯಿ, ಮಗಳು
ದೀಪಾವಳಿ (Deepavali) ಹಬ್ಬದ ರಜೆ ಹಿನ್ನೆಲೆ ಬಾಲಕರು ಗ್ರಾಮಕ್ಕೆ ಬಂದಿದ್ದರು. 4 ಗಂಟೆ ವೇಳೆಯಲ್ಲಿಯೇ ಈಜಲು ಬಂದಿದ್ದ ಬಾಲಕರು. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ತೀರಿಸಲಾಗದೇ ಯೋಧ ಆತ್ಮಹತ್ಯೆ