ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಶ್ರೇಷ್ಠ ಹಾಸ್ಯ ಕಲಾವಿದ, ನಟ ಗೋವರ್ಧನ್ ಅಸ್ರಾನಿ (Govardhan Asrani) ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಂತಾಕ್ರೂಜ್ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ರಾಯಚೂರು | ರಮೇಶ್ ಕತ್ತಿ ವಿರುದ್ಧ ದೂರು ಪಡೆಯಲು ನಿರಾಕರಣೆ – ಪೊಲೀಸ್ ಠಾಣೆ ಎದುರು ಹೈಡ್ರಾಮಾ
ಭಾರತದ ಸಾರ್ವಕಾಲಿಕ ಚಿತ್ರಗಳಲ್ಲೊಂದಾದ ʻಶೋಲೆʼ ಚಿತ್ರದ ಜೈಲರ್ ಪಾತ್ರದ ಮೂಲಕ ಜಗದ್ವಿಖ್ಯಾತಿ ಗಳಿಸಿದ್ದ ಗೋವರ್ಧನ್ ಅಸ್ರಾನಿ ಮೂಲತಃ ರಾಜಸ್ಥಾನದ ಜೈಪುರದ ನಿವಾಸಿ. ಇನ್ನೂ ಇಳಿ ವಯಸ್ಸಿನಲ್ಲಿ ಕೂಡ ಅದೇ ಉತ್ಸಾಹ ಮತ್ತು ಹುಮ್ಮಸ್ಸಿನಲ್ಲಿ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ 84 ವರ್ಷದ ಅಸ್ರಾನಿ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಸೋಶಿಯಲ್ ಮೀಡಿಯಾ ಫಾಲೋವರ್ಸ್‌ಗಳಿಗೆ ಹಾಗೂ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದರು.
ಮೂಲಗಳ ಪ್ರಕಾರ, ಇಂದು ಸಂಜೆ 4 ಗಂಟೆವರೆಗೆ ಅಸ್ರಾನಿ ಆರೋಗ್ಯವಾಗಿಯೇ ಇದ್ದರು. 4 ಘಂಟೆಯ ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸ್ರಾನಿ ಕೊನೆಯುಸಿರೆಳೆದರು. ಇದನ್ನೂ ಓದಿ: ಬೇಗ ಮದ್ವೆ ಆಗಿ, ನಾವು ಕಾಯ್ತಿದ್ದೇವೆ – ರಾಹುಲ್ ಗಾಂಧಿಗೆ ಅಂಗಡಿ ಮಾಲೀಕ ಮನವಿ
ಭಾರತೀಯ ಚಿತ್ರರಂಗಕ್ಕೆ 5 ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಅಸ್ರಾನಿ ಅವರು 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಪೈಕಿ ಅಮಿತಾಬ್ ಬಚ್ಚನ್, ಧಮೇಂದ್ರ, ಹೇಮಾಮಾಲಿನಿ ಮತ್ತು ಜಯಾ ಬಚ್ಚನ್ ಅಭಿನಯದ ʻಶೋಲೆʼಯ ಜೈಲರ್ ಪಾತ್ರ ಇವರಿಗೆ ಅಪಾರ ಕೀರ್ತಿ ಮತ್ತು ಹೆಸರು ತಂದು ಕೊಟ್ಟಿತ್ತು.
ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತರಬೇತಿ ಪಡೆದು 1960ರ ಸುಮಾರು ಚಿತ್ರರಂಗ ಪ್ರವೇಶ ಮಾಡಿದ್ದ ಅಸ್ರಾನಿ ಆರಂಭದಲ್ಲಿ ಗಂಭೀರವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಗುಜರಾತಿ ಮತ್ತು ರಾಜಸ್ಥಾನಿ ಚಿತ್ರಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೂಡ ಕೆಲಸ ಮಾಡಿದ್ದ ಅಸ್ರಾನಿ ಹಿಂದಿ ಮತ್ತು ಗುಜರಾತಿ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದ್ದರು. ಇದನ್ನೂ ಓದಿ: ಮಂಡ್ಯ ಭತ್ತಕ್ಕೆ ಫಿಲಿಪೈನ್ಸ್ ನಂಟು – ಹೊಸ ತಳಿ ಸಂಶೋಧನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ