ಇಸ್ಲಾಮಾಬಾದ್: ವಾರಾಂತ್ಯದಲ್ಲಿ ಸಂಭವಿಸಿದ್ದ ಎರಡು ಭೂಕಂಪನದ ಬಳಿಕ ಇದೀಗ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಸೋಮವಾರ (ಅ.20) ಪಾಕಿಸ್ತಾನದಲ್ಲಿ (Pakistan) 10 ಕಿ.ಮೀ ಆಳದಲ್ಲಿ 4.7 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಅ.18 ಹಾಗೂ ಅ.19ರಂದು 4.0 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸೋಮವಾರ 4.7 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ 11:12ರ ಸುಮಾರಿಗೆ ಭೂಮಿ ಕಂಪಿಸಿದ್ದು, ಈ ರೀತಿಯ ಭೂಕಂಪಗಳು ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು – 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಆರ್ಜೆಡಿ
ಈ ಭೂಕಂಪನದಿಂದಾಗಿ ಪಂಜಾಬ್ನ ಡೇರಾ ಘಾಜಿ ಖಾನ್ ಸುತ್ತಮುತ್ತಿನ ಪ್ರದೇಶದ ಮೇಲೆ ಪರಿಣಾಮ ಬೀರಿದೆ.
ಪಾಕಿಸ್ತಾನವು ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಒಂದಾಗಿದೆ. ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ನಂತಹ ಪ್ರಾಂತ್ಯಗಳು ಯುರೇಷಿಯನ್ ಪ್ಲೇಟ್ನ ದಕ್ಷಿಣ ಅಂಚಿನಲ್ಲಿದ್ದರೆ, ಸಿಂಧ್ ಮತ್ತು ಪಂಜಾಬ್ ಭಾರತೀಯ ಪ್ಲೇಟ್ನ ವಾಯುವ್ಯ ಅಂಚಿನಲ್ಲಿದ್ದು, ಆಗಾಗ್ಗೆ ಭೂಕಂಪಕ್ಕೆ ಕಾರಣವಾಗುತ್ತದೆ.
EQ of M: 4.7, On: 20/10/2025 11:12:08 IST, Lat: 30.51 N, Long: 70.41 E, Depth: 10 Km, Location: Pakistan.
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/zI0096wbyN— National Center for Seismology (@NCS_Earthquake) October 20, 2025
ಅರೇಬಿಯನ್ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ಗಳ ನಡುವಿನ ಸಕ್ರಿಯ ಗಡಿಯ ಬಳಿ ಇರುವ ಬಲೂಚಿಸ್ತಾನವು, 1945ರ ವಿನಾಶಕಾರಿ 8.1 ತೀವ್ರತೆಯ ಭೂಕಂಪ ಸೇರಿದಂತೆ ಬಲವಾದ ಭೂಕಂಪಗಳ ದೀರ್ಘ ಇತಿಹಾಸವನ್ನು ಹೊಂದಿದೆ.ಇದನ್ನೂ ಓದಿ: ದೀಪಾವಳಿ ಗಿಫ್ಟ್ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ