ಮೊದಲ ದಿನ ಸಾಧ್ಯವಾಗದ ಹಾಸನಾಂಬೆ ದರ್ಶನ – ಇಂದು ಮತ್ತೆ ದೇವಾಲಯಕ್ಕೆ ಬಂದ ಸುಳ್ಯ ಶಾಸಕಿ

Public TV
1 Min Read

ಹಾಸನ: ಸುಳ್ಯ (Sullia) ಶಾಸಕಿ ಭಾಗಿರಥಿಯವರು (MLA Bhagirathi) ಹಾಸನಾಂಬಾ ದೇವಿ (Hasanamba) ದರ್ಶನ ಪಡೆದಿದ್ದಾರೆ. ಅವರು ಜಾತ್ರೆಯ ಮೊದಲ ದಿನ ಸಹ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಅವರಿಗೆ ಹಾಸನಾಂಬೆ ದರ್ಶನ ಸಾಧ್ಯವಾಗಿರಲಿಲ್ಲ.

ಈ ಹಿಂದೆ ಸಾರ್ವಜನಿಕ ದಿನ ಆಗಮಿಸಿದ್ದು, ಪ್ರೋಟೋಕಾಲ್ ಮುಗಿದ ಮೇಲೆ ಬಂದಿದ್ದರು. ಆಗ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಆದ್ದರಿಂದ ಇಂದು ಶಿಷ್ಟಾಚಾರದ ವಾಹನದಲ್ಲಿ ಬಂದು ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದ ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ದಂಪತಿ

ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ದಿನ ಬಂದಿದ್ದೆ. ಪ್ರೋಟೋಕಾಲ್ ಏಕೆ ಉಲ್ಲಂಘನೆ ಮಾಡೋದು ಅಂಥ ವಾಪಾಸ್ ಹೋಗಿದ್ದೆ. ಇವತ್ತು ಎರಡನೇ ದಿನ ಬಂದಿದ್ದೇನೆ. ನನಗೆ ಒಳ್ಳೆಯ ದರ್ಶನ ಆಯ್ತು. ಹಾಸನಾಂಬ ದೇವಿ ದರ್ಶನ ಖುಷಿ ಕೊಟ್ಟಿದೆ. ಎರಡನೇ ವರ್ಷ ಬರುತ್ತಿದ್ದೇನೆ‌. ಇಷ್ಟು ಜನ ಸೇರುವಾಗ ಒಳ್ಳೆಯ ವ್ಯವಸ್ಥೆ ಮಾಡಬೇಕು. ಯಾವುದೇ ಸರ್ಕಾರವಿರಲಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.

ತುಂಬಾ ಜನ ಭಕ್ತರು ಬಂದಿದ್ದು, ಯಾರೂ ತಾಳ್ಮೆಗೆಡಬಾರದು. ಗೊಂದಲ ಆದರೂ ಶಾಂತವಾಗಿರಬೇಕು. ಇಡೀ ಸಮಸ್ತ ಜನರಿಗೆ ದೇವಿ ಸುಭೀಕ್ಷೆ ನೀಡಲಿ ಎಂದು ಹಾರೈಸಿದರು. ಇದನ್ನೂ ಓದಿ: ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಪತ್ನಿ

Share This Article