ಬೀದರ್: ಪ್ರಯಾಣ ಮಾಡುವಾಗ ಬಸ್‌ನಲ್ಲೇ ಬಿಟ್ಟು ಹೋಗಿದ್ದ 1.60ಲಕ್ಷ ಹಣವನ್ನು ಪ್ರಯಾಣಿಕನಿಗೆ ಮರಳಿ ನೀಡಿ ಕಂಡಕ್ಟರ್ ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ಬಳಿ ಈ ಘಟನೆ ನಡೆದಿದೆ. 1.60 ಲಕ್ಷ ರೂ. ಬಸ್‌ನಲ್ಲೇ ಬಿಟ್ಟು ಹೋದ ವಿಷಯ ತಿಳಿದು ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕರಾದ ಸಿದ್ರಾಮ್ ಮತ್ತು ಚಾಲಕರಾದ ಹನೀಪ್ ಗ್ರಾಮಕ್ಕೆ ಹೋಗಿ ಹಣದ ಚೀಲ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.ಇದನ್ನೂ ಓದಿ: ಮೈದುನನ ಜೊತೆ ಮಲಗೋಕೆ ಒತ್ತಾಯಿಸ್ತಿದ್ರು, ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದಾರೆ – ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ
ಗ್ರಾಮಕ್ಕೆ ತೆರಳಿ ವಯೋವೃದ್ಧನಿಗೆ ಹಣ ವಾಪಸ್ ನೀಡಿದ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಗೆ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ.