ನಿಮ್ಮ ಮಕ್ಕಳಿಗೆ ಲಾಠಿ, ಗನ್‌ ಟ್ರೈನಿಂಗ್‌ ಕೊಟ್ಟಿದ್ದೀರಾ ಎಂದ ‘ಕೈ’ ನಾಯಕರಿಗೆ ಟಾಂಗ್‌ – ತಂದೆ, ನಾನು, ಮಗ RSS ಎಂದ ಸುನಿಲ್‌ ಕುಮಾರ್‌

Public TV
1 Min Read

– ಮಗನನ್ನು ಶಾಸಕ ಮಾಡಲ್ಲ ಅಂತ ಪ್ರಿಯಾಂಕ್ ಖರ್ಗೆಗೆ ತಿರುಗೇಟು

ಉಡುಪಿ: ನಿಮ್ಮ ಮಕ್ಕಳನ್ನು ಆರ್‌ಎಸ್‌ಎಸ್‌ಗೆ ಸೇರಿಸಿದ್ದೀರಾ. ಅವರಿಗೆ ಲಾಠಿ, ಗನ್‌ ಟ್ರೈನಿಂಗ್‌ ಕೊಟ್ಟಿದ್ದೀರಾ ಎಂಬ ಕಾಂಗ್ರೆಸ್‌ ನಾಯಕರ ಟೀಕೆಗೆ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗುಡುಗಿರುವ ಶಾಸಕ ಸುನಿಲ್ ಕುಮಾರ್, ನನ್ನ ತಂದೆ, ನಾನು ಮತ್ತು ನನ್ನ ಪುತ್ರ ಆರ್‌ಎಸ್‌ಎಸ್ ಸ್ವಯಂ ಸೇವಕರು. ನನ್ನ ತಂದೆ ಶಾಸಕ ಅಲ್ಲ, ನಾನು ನನ್ನ ಪುತ್ರನನ್ನು ಶಾಸಕ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ಟಿದ್ದಾರೆ. ಜೊತೆಗೆ ತಂದೆ ಮತ್ತು ಪುತ್ರ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಆರ್‌‌ಎಸ್‌ಎಸ್‌ ಚಟುವಟಿಕೆಗಳನ್ನು ಬ್ಯಾನ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಉಡುಪಿ ಜಿಲ್ಲೆಯ ಕಾರ್ಕಳದ ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಸೆಡ್ಡು ಹೊಡೆದಿದ್ದಾರೆ. ಕಾರ್ಕಳ ಪೇಟೆಯಲ್ಲಿ ಇವತ್ತು RSS ಪಥಸಂಚಲನ ನಡೆದಿದೆ. ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಅನಂತಶಯನ ದೇವಸ್ಥಾನದವರೆಗೆ ಪರೇಡ್ ಮಾಡಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್, ಸಹಿತ ನೂರಾರು ಜನ ಭಾಗವಹಿಸಿದ್ದರು‌.

Share This Article