ಮಳೆಯಾಟದಲ್ಲಿ ಗೆದ್ದ ಆಸ್ಟ್ರೇಲಿಯಾ – ಭಾರತದ ವಿರುದ್ಧ 7 ವಿಕೆಟ್‌ಗಳ ಗೆಲುವು

Public TV
0 Min Read

ಪರ್ತ್‌: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್‌ಗಳ ಜಯ ಸಾಧಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾಗೆ ಹಲವು ಬಾರಿ ಮಳೆ ಅಡಚಣೆಯಾಯಿತು. ಓವರ್‌ಗಳ ಸಂಖ್ಯೆಯಲ್ಲಿ ಮೊದಲು 32 ಕ್ಕೆ ಇಳಿಸಲಾಯಿತು. ಮತ್ತೆ ಮಳೆ ಕಾರಣಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದಡಿ 26ಕ್ಕೆ ಓವರ್‌ಗಳ ಸಂಖ್ಯೆ ಇಳಿಸಲಾಯಿತು.

ಟೀಂ ಇಂಡಿಯಾ ಬ್ಯಾಟಿಂಗ್‌ ವೈಫಲ್ಯದಿಂದ 26 ಓವರ್‌ಗೆ 130 ರನ್‌ ಗಳಿಸಿತು. ರೋಹಿತ್‌ ಶರ್ಮಾ (8), ಕ್ಯಾಪ್ಟನ್‌ ಶುಭಮನ್‌ ಗಿಲ್‌ (10), ಶ್ರೇಯಸ್‌ ಅಯ್ಯರ್‌ (11) ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ವಿರಾಟ್‌ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ದು ನಿರಾಸೆ ಮೂಡಿಸಿತು.

ಕೆ.ಎಲ್.ರಾಹುಲ್‌ 38, ಅಕ್ಷರ್‌ ಪಟೇಲ್‌ 31 ರನ್‌ ಗಳಿಸಿ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು. ವಾಷಿಂಗ್ಟನ್‌ ಸುಂದರ್‌ 10, ನಿತೀಶ್‌ ಕುಮಾರ್‌ ರೆಡ್ಡಿ 19 ರನ್‌ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ 26 ಓವರ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು 130 ರನ್‌ ಗಳಿಸಿತು.

131 ರನ್‌ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಸುಲಭ ಗೆಲುವು ದಾಖಲಿಸಿತು. ತಂಡದ ಪರ ಮಿಚೆಲ್‌ ಮಾರ್ಷ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಔಟಾಗದೇ 46 ರನ್‌ ಗಳಿಸಿದರು. ಇವರಿಗೆ ಜೋಶ್‌ ಫಿಲಿಪ್‌ (37), ಮ್ಯಾಟ್ ರೆನ್ಶಾ (21) ಸಾಥ್‌ ನೀಡಿದರು. ಕೊನೆಗೆ ಆಸ್ಟ್ರೇಲಿಯಾ, ಭಾರತದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು.

Share This Article