ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪೂರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಇಲ್ಲ

Public TV
1 Min Read

ಕಲಬುರಗಿ: ಪ್ರಿಯಾಂಕ್‌ ಖರ್ಗೆ(Priynak Khgarge) ಪ್ರತಿನಿಧಿಸುವ ಚಿತ್ತಾಪೂರದಲ್ಲಿ (Chittapur) ಸರ್ಕಾರ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್‌ (RSS) ಪಥ ಸಂಚನಲನಕ್ಕೆ ಅನುಮತಿ ನೀಡಲು ನಿರಾಕರಿಸಿದೆ.

ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಎಂಬ ಕಾರಣ ನೀಡಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ತಾಲೂಕು ತಹಶೀಲ್ದಾರ್‌ ನಾಗಯ್ಯ ಅನುಮತಿ ನೀಡಲು ನಿರಾಕರಿಸಿದ್ದಾರೆ.

ಯಾವ ಕಾರಣಕ್ಕೆ ನಿರಾಕರಣೆ?
ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ತವರು ಕ್ಷೇತ್ರದಲ್ಲಿ ಬಂದ್‌ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಇದನ್ನೂ ಓದಿ:  ಪ್ರಿಯಾಂಕ್‌ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ – 12 ಪ್ರಶ್ನೆ ಕೇಳಿದ ಸರ್ಕಾರ

ಆರ್‌ಎಸ್‌ಎಸ್‌ ಪಥಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ(ರಿ) ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದಾರೆ.

ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ.

Share This Article