ರಾಯಚೂರು: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ಪಿಡಿಓ (PDO) ಅಮಾನತು ಮಾಡಿದ್ದ ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಹಾಗೂ ಕಾಂಗ್ರೆಸ್ ಜಟಾಪಟಿಯಲ್ಲಿ ಅಮಾನತಾಗಿರುವ ರಾಯಚೂರಿನ ಸಿರವಾರ ತಾಲೂಕಿನ ಪಿಡಿಓ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕ ಪ್ರವೀಣ ಕುಮಾರ್ ವಿಚಾರ ಈಗ ಅತ್ಯಂತ ಚರ್ಚೆಗೆ ಗ್ರಾಸವಾಗಿದೆ. ಲಿಂಗಸುಗೂರಿನಲ್ಲಿ ಪಿಡಿಓ ಪ್ರವೀಣ್ ಕುಟುಂಬ ಕಣ್ಣೀರಾಕಿ ಸರ್ಕಾರದ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದೆ.ಇದನ್ನೂ ಓದಿ: ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ
ಪ್ರವೀಣ್ ತಾಯಿ, ಪತ್ನಿ ನಮಗೆ ಅನ್ಯಾಯವಾಗಿದೆ ಅಂತ ಕಣ್ಣೀರಾಕಿದ್ದಾರೆ. ಪ್ರವೀಣ್ ಯಾವುದೇ ಅವ್ಯವಹಾರ ಮಾಡಿಲ್ಲ, ಪಥಸಂಚಲನಕ್ಕೆ ಹೋಗಿದ್ದೇ ದೊಡ್ಡ ತಪ್ಪಾ, ಈಗ ಮಾನಸಿಕವಾಗಿ ನೊಂದಿದ್ದಾನೆ. ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಹಿಂದೆಯೂ ಪಥಸಂಚಲನದಲ್ಲಿ ಭಾಗವಹಿದ್ದರು ಅದರಲ್ಲಿ ತಪ್ಪೇನಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಪಥಸಂಚಲನ ಭಾಗವಹಿಸಿದ್ದಕ್ಕೆ ಕ್ರಮಾನಾ.. ಕೂಡಲೇ ಅಮಾನತು ಹಿಂಪಡೆಯಬೇಕು ಅಂತ ಪ್ರವೀಣ್ ತಾಯಿ ಸುರೇಖಾ ಪತ್ನಿ ಶ್ರೀದೇವಿ ಒತ್ತಾಯಿಸಿದ್ದಾರೆ.
ಇನ್ನೂ ಪಿಡಿಓ ಅಮಾನತನ್ನ ಶಾಸಕ ಮಾನಪ್ಪ ವಜ್ಜಲ್ ಖಂಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಗುಬ್ಬಿ ಮೇಲೆ ಬ್ರಹ್ಮಾಸ್ತç ಬಿಟ್ಟಿದ್ದಾರೆ. ಯಾವುದೇ ನೋಟಿಸ್ ಕೊಡದೇ ಬಿಜೆಪಿ ಶಾಸಕನ ಪಿಎ ಅಂತ ಪ್ರವೀಣನ್ನ ಅಮಾನತು ಮಾಡಲಾಗಿದೆ. ನಾಲ್ಕು ವೋಟು ಬರ್ತವೆ ಅಂದ್ರೆ ಆರ್‌ಎಸ್‌ಎಸ್‌ನವರನ್ನ ಕಾಂಗ್ರೆಸ್ ತನ್ನ ಪಕ್ಷಕ್ಕೆ ಸೆಳೆಯುತ್ತೆ. ಆರ್‌ಎಸ್‌ಎಸ್ ಕಾರ್ಯಕರ್ತ ಗೋವಿಂದ ನಾಯಕ್‌ನನ್ನ ಕಾಂಗ್ರೆಸ್‌ನವರು ಲಿಂಗಸುಗೂರು ತಾಲೂಕು ಅಧ್ಯಕ್ಷ ಮಾಡಿದ್ದಾರೆ. ಆದ್ರೆ ನನ್ನ ಆಪ್ತ ಸಹಾಯಕನನ್ನ ಅಮಾನತು ಮಾಡಿದ್ದಾರೆ. ಇನ್ನೂ ಎಂಟು ದಿನದಲ್ಲಿ ಅಮಾನತು ಆದೇಶ ವಾಪಸ್ ಪಡೆಯಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ