ರಿಷಬ್‌ಗೆ ಆಕ್ಸಿಡೆಂಟ್‌ ಆಗಿತ್ತು, ಜ್ವರ ಇದ್ರೂ ಸೆಟ್‌ಗೆ ಗಾಬರಿಯಿಂದ ಬಂದಿದ್ದೆ: ಪ್ರಗತಿ ಶೆಟ್ಟಿ

Public TV
2 Min Read

– ಕಾಂತಾರ ಚಾಪ್ಟರ್‌ 1 ಶೂಟಿಂಗ್‌ ವೇಳೆ ಆದ ಅವಘಡಗಳ ಬಗ್ಗೆ ರಿಷಬ್‌ ಪತ್ನಿ ‘ಪಬ್ಲಿಕ್‌ ಟಿವಿ’ ಜೊತೆ ಮಾತು

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 (Kantara Chapter 1) ಬಾಕ್ಸಾಫೀಸ್‌ ಹಿಟ್‌ ಕಂಡಿದೆ. ಸಿನಿಮಾ ಯಶಸ್ಸಿನ ಹಿಂದೆ ಅಷ್ಟೇ ಕಡುಪರಿಶ್ರಮ ಇದೆ. ತೆರೆ ಹಿಂದಿನ ಚಿತ್ರೀಕರಣದಲ್ಲಿ ಎದುರಾದ ಅವಘಡಗಳು, ಎದುರಿಸಿದ ಸವಾಲುಗಳ ಬಗ್ಗೆ ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ಮಾತನಾಡಿದ್ದಾರೆ.

‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ ಪ್ರಗತಿ ಶೆಟ್ಟಿ ಅವರು, ಕಾಂತಾರ ಶೂಟಿಂಗ್‌ ವೇಳೆ ಎಷ್ಟೋ ಆತಂಕದ ರಾತ್ರಿಗಳನ್ನು ಕಳೆದಿದ್ದೇವೆ. ಒಂದು ದಿನ ಚಿಕ್ಕದಾಗಿ ಆಕ್ಸಿಡೆಂಟ್‌ ಆಗಿತ್ತು. ಆ ದಿನ ಜ್ವರದ ಕಾರಣಕ್ಕೆ ಶೂಟಿಂಗ್‌ಗೆ ಹೋಗಿರಲಿಲ್ಲ. ಆತಂಕ ಪಡುತ್ತೇನೆ ಅಂತ ನನಗೆ ರಿಷಬ್‌ ಏನನ್ನೂ ಹೇಳಲ್ಲ. ಕಾಸ್ಟ್ಯೂಮ್ಸ್‌ ವಿಚಾರಕ್ಕೆ ಅಸಿಸ್ಟೆಂಟ್‌ಗೆ ಕರೆ ಮಾಡಿದಾಗ ವಿಚಾರ ಗೊತ್ತಾಯಿತು. ಗಾಬರಿಯಿಂದ ಸೆಟ್‌ಗೆ ಧಾವಿಸಿದೆ. ಆಗ ರಿಷಬ್‌ (Rishab Shetty) ಏನೂ ಆಗಿಲ್ಲ ನೋಡು ಎಂದು ಹೇಳಿದಾಗ ಸಮಾಧಾನ ಆಯಿತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಕಾಂತಾರ ಸೂಪರ್ ಸಕ್ಸಸ್ – ಕಾಶಿ ಯಾತ್ರೆ ಕೈಗೊಂಡ ಡಿವೈನ್‍ಸ್ಟಾರ್

ಸಿನಿಮಾದಲ್ಲಿ ಎಲ್ಲಾ ಫೈಟಿಂಗ್‌ ಸೀನ್‌ಗಳನ್ನು ತುಂಬಾ ಜಾಗರೂಕತೆಯಿಂದ ನಿರ್ವಹಿಸಿದ್ದಾರೆ. ಮುಂಜಾಗ್ರತೆ ಕ್ರಮವಹಿಸಿ, ಸುರಕ್ಷತೆ ನೋಡಿಕೊಂಡೇ ಎಲ್ಲಾ ಮಾಸ್ಟರ್‌ಗಳು ಆಕ್ಷನ್‌ ಸೀನ್‌ಗಳನ್ನು ಮಾಡಿದ್ದಾರೆ. ರಿಷಬ್‌ಗೆ ಆಕ್ಷನ್‌ ಸೀನ್‌ಗಳ ಮೇಲೆಯೇ ಆಸಕ್ತಿ ಜಾಸ್ತಿ. ಅಂದುಕೊಂಡಿದ್ದನ್ನು ಮಾಡಬೇಕು ಅನ್ನೋ ಹಠ. ಎಷ್ಟು ಸುಸ್ತಾದ್ರೂ ಕೇಳಲ್ಲ, ನಾನು ಮಾಡ್ತೀನಿ ಅಂತಾರೆ. ಜೋಶ್‌ ಜಾಸ್ತಿ. ಅದಕ್ಕೆ ನನಗೆ ಟೆನ್ಷನ್‌ ಆಗ್ತಿತ್ತು ಎಂದು ಹೇಳಿದರು.

ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್‌ಗೆ ಕಾಲು ಫ್ರ್ಯಾಕ್ಚರ್‌ ಆಗಿತ್ತು. ಎಷ್ಟು ಮಾಡಿದ್ರೂ ಶೂಟಿಂಗ್‌ ಮುಗಿಯುತ್ತಿರಲಿಲ್ಲ. ಟೆಂಪ್ರವರಿ ಟ್ರೀಟ್‌ಮೆಂಟ್‌ ಅಷ್ಟೇ ರಿಷಬ್‌ ತೆಗೆದುಕೊಳ್ತಿದ್ದು. ಮತ್ತೆ ಮರುದಿನ ಶೂಟಿಂಗ್‌ಗೆ ಹೋಗ್ತಿದ್ರು. ಬ್ರೇಕ್‌ ತಗೋ ಅಂತ ಹೇಳಿದ್ರೂ ಕೇಳ್ತಿರಲಿಲ್ಲ. ಪರಿಶ್ರಮ, ತಾಳ್ಮೆ ಜಾಸ್ತಿ ಇತ್ತು. ಅದಕ್ಕೆ ಅನ್ಸುತ್ತೆ ರಿಸಲ್ಟ್‌ ದೊಡ್ಡದಾಗಿ ಸಿಕ್ಕಿದೆ. ಸಿನಿಮಾ ನಿರ್ಮಾಣ ಜರ್ನಿಯಲ್ಲಿ ತುಂಬಾ ಸಮಸ್ಯೆ ಎದುರಿಸಿ, ನೋವು ತಡೆದುಕೊಂಡಿದ್ದಾರೆ ಎಂದು ಶೂಟಿಂಗ್‌ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಕಾಂತಾರ ಚಿತ್ರದ ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ: ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟನೆ

Share This Article