ದೀಪಾವಳಿ ಹಬ್ಬ ಬಂತು ಅಂದ್ರೆ ಚಳಿಗಾಲವೂ ಶುರುವಾಯ್ತು ಎಂದೇ ಅರ್ಥ. ಈ ಸಂದರ್ಭದಲ್ಲಿ ಆರೋಗ್ಯ ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿ ಹಬ್ಬದಲ್ಲೂ ಸಿಹಿ ತಿನಿಸುಗಳೇ ಹೆಚ್ಚು ವಿಶೇಷ. ಬಂಧು-ಬಳಗದವರಿಗೆ ಬಾಯಿ ಸಿಹಿ ಮಾಡಿಸಿ ಹಬ್ಬವನ್ನು ಸಮೃದ್ಧಿಯಿಂದ ಆಚರಣೆ ಮಾಡ್ತಾರೆ. ಈ ಬಾರಿ ಮನೆಯಲ್ಲೇ ಮಾಡಬಹುದಾದ ಸ್ಪೆಷಲ್ ವಾಲ್ನಟ್ ಬರ್ಫಿ (Walnut Burfi) ಮಾಡೋದು ಹೇಗೆಂದು ಹೇಳಿಕೊಡ್ತಿದ್ದೇವೆ. ಮನೆಯಲ್ಲೇ ಮಾಡಿ ಸವಿದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೂ ಹಂಚಿ ಸಂಬಂಧಗಳನ್ನು ಗಟ್ಟಿಗೊಳಿಸಿ.
ಬೇಕಾಗುವ ಪದಾರ್ಥಗಳು:
ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್
ಸಕ್ಕರೆ – 4 ಟೀಸ್ಪೂನ್
ಹಾಲಿನ ಪುಡಿ – 4 ಟೀಸ್ಪೂನ್
ಹಾಲು – 4 ಟೀಸ್ಪೂನ್
ಜಾಯಿಕಾಯಿ ಪುಡಿ – ಚಿಟಿಕೆ
ತುಪ್ಪ – 4 ಟೀಸ್ಪೂನ್
ಮಾವಾ – ಕಾಲು ಕಪ್
ಬೇಕಾಗುವ ಪದಾರ್ಥಗಳು:
* ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ.
* ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ.
* ಉಳಿದ ತುಪ್ಪವನ್ನು ವಾಲ್ನಟ್ಗೆ ಸೇರಿಸಿ 1 ನಿಮಿಷ ಬೆರೆಸಿ. ಅದನ್ನು 2 ನಿಮಿಷಗಳ ಕಾಲ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
* ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆ ಮಿಶ್ರಣ ಸೇರಿಸಿ ಮೈಕ್ರೊವೇವ್ನಲ್ಲಿ 1 ನಿಮಿಷ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
* ಈಗ ಗ್ರೀಸ್ ಮಾಡಿದ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹರಡಿ, 1 ಗಂಟೆ ತಣ್ಣಗಾಗಲು ಪಕ್ಕಕ್ಕೆ ಇರಿಸಿ.
* ನಂತರ ಅದನ್ನು ಚಾಕುವಿನ ಸಹಾಯದಿಂದ ಚೌಕಾಕಾರ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳಿ.
* ಇದೀಗ ವಾಲ್ನಟ್ ಬರ್ಫಿ ತಯಾರಾಗಿದ್ದು, ಕುಟುಂಬ, ಸ್ನೇಹಿತರಿಗೆ ಹಂಚಿ. ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್