ಬೆಂಗಳೂರು: ಕೃತಿಕಾ ರೆಡ್ಡಿ (Krutkia Reddy) ಹಾಗೂ ಮಹೇಂದ್ರ ರೆಡ್ಡಿ (Mahendra Reddy) ವಿವಾಹಕ್ಕೂ ಮುನ್ನ ಕಾಶ್ಮೀರದಲ್ಲಿ ಪ್ರಿ ವೆಡ್ಡಿಂಗ್ ಶೂಟ್ (Pre Wedding Shoot) ಮಾಡಿಸಿದ್ದರು.
ಮೇ 26, 2024 ರಲ್ಲಿ ಇವರಿಬ್ಬರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಮದುವೆ ಮುನ್ನ ಫೆಬ್ರವರಿಯಲ್ಲಿ ಇವರಿಬ್ಬರು ಸಿನಿಮಾದ ನಾಯಕ, ನಾಯಕಿಯರಂತೆ ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿದ್ದರು.
ಪ್ರಿವೆಡ್ಡಿಂಗ್ ಶೂಟ್‌ಗಾಗಿ ಇವರಿಬ್ಬರು ಕಾಶ್ಮೀರದ ದಾಲ್ ಲೇಕ್, ಸೋನಮಾರ್ಗ್, ಗುಲ್ಮಾರ್ಗ್, ಡ್ರಂಗ್ ವಾಟರ್‌ಫಾಲ್, ಶಂಕರ ಆಚಾರ್ಯ ದೇವಸ್ಥಾನ , ದರ್ಗಾ ಹಜರತ್ಬಾಲ್‌ನಲ್ಲಿ ಶೂಟ್ ಮಾಡಲಾಗಿತ್ತು. ಇದನ್ನೂ ಓದಿ: ಪತಿಯಿಂದ ವೈದ್ಯೆ ಹತ್ಯೆ; ಮಗಳಿಗಾಗಿ ಕಟ್ಟಿಸಿದ್ದ 4 ಕೋಟಿ ರೂ. ಮನೆ ಇಸ್ಕಾನ್‌ಗೆ ದಾನ ಮಾಡಿದ ತಂದೆ
ಏನಿದು ಪ್ರಕರಣ?
ಅನಸ್ತೇಶಿಯಾ ಕೊಟ್ಟು ವೈದ್ಯ ಪತ್ನಿಯನ್ನೇ ವೈದ್ಯ ಪತಿ ಮರ್ಡರ್ ಮಾಡಿದ ಘಟನೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. 11 ತಿಂಗಳ ಹಿಂದೆ ಡಾ.ಕೃತಿಕಾ ರೆಡ್ಡಿ-ಡಾ.ಮಹೇಂದ್ರ ರೆಡ್ಡಿಗೆ ಮದುವೆಯಾಗಿತ್ತು. ಇಬ್ಬರೂ ವಿಕ್ಟೋರಿಯಾದಲ್ಲಿ ಕೆಲಸ ಮಾಡ್ತಿದ್ದರು. ಚರ್ಮರೋಗ ತಜ್ಞೆ ಆಗಿರೋ ಡಾ.ಕೃತಿಕಾ ರೆಡ್ಡಿ ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್‌ನಿಂದ ಬಳಲುತ್ತಿದ್ದರು. ಆದರೆ ಇದನ್ನು ಮುಚ್ಚಿಟ್ಟು ನನಗೆ ಮದುವೆ ಮಾಡಿಸಿದ್ದಾರೆ ಅಂತ ಕುಪಿತಗೊಂಡಿದ್ದ ಪತಿ ಡಾ. ಮಹೇಂದ್ರ ರೆಡ್ಡಿ, ಗ್ಯಾಸ್ಟ್ರಿಕ್‌ಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಅನಸ್ತೇಶಿಯಾ ಕೊಟ್ಟು ಕೊಲೆ ಮಾಡಿದ್ದಾನೆ. ಇದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೇಹದ ಅಂಗಾಂಗಳಲ್ಲಿ ಅನಸ್ತೇಶಿಯಾ ಇರುವುದು ಬಯಲಾದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿದೆ.