ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ನಟಿ ಪ್ರಣೀತಾ ಸುಭಾಷ್ (Pranitha Subhash) ಇದೀಗ ಎರಡು ಮಕ್ಕಳ ತಾಯಿ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಇರುವ ನಟಿ. ಇಬ್ಬರು ಮಕ್ಕಳ ತಾಯಿಯಾದ ಬಳಿಕವೂ ಗ್ಲ್ಯಾಮರ್ ಕಾಪಾಡಿಕೊಂಡಿರುವ ನಟಿ ಪ್ರಣೀತಾ ಈಗ ಇನ್ಸ್ಟಾಗ್ರಾಮ್ನಲ್ಲಿ ಹಲ್ಚಲ್ ಸೃಷ್ಟಿಸುವ ಫೋಟೋ ಪೋಸ್ಟ್ ಮಾಡಿದ್ದಾರೆ.
ವಿನೂತನ ಡಿಸೈನ್ ಫೋಟೋ ಪೋಸ್ಟ್ ಮಾಡಿರುವ ಪ್ರಣೀತಾ ಮುತ್ತಿನಿಂದಲೇ (Pearls) ಪೋಣಿಸಿರುವ ರವಿಕೆ ಧರಿಸಿದ್ದಾರೆ. ಮುತ್ತಿನ ರವಿಕೆ ಡಿಸೈನ್ ಆಕರ್ಷಕವಾಗಿ ಕಾಣುತ್ತಿದ್ದು ಅತ್ಯಂತ ಮೋಹಕವಾಗಿದೆ. ಇದೇ ಉಡುಗೆಯಲ್ಲಿ ಪ್ರಣೀತಾ ವಿಧವಿಧದ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್
View this post on Instagram
ಫ್ಯಾಶನ್ ಮಾಡೆಲ್ ಆಗಿರುವ ಪ್ರಣೀತಾ ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಫುಲ್ ಆ್ಯಕ್ಟೀವ್. ಇತ್ತೀಚೆಗೆ ಕೇನ್ ಫಿಲ್ಮ್ ಫೆಸ್ಟಿವಲ್ನಲ್ಲೂ ಭಾಗವಹಿಸಿದ್ದರು. ಅಂದಹಾಗೆ ಇನ್ಸ್ಟಾದಲ್ಲಿ ಸುಮಾರು 60 ಲಕ್ಷದಷ್ಟು ಫಾಲೋವರ್ಸ್ ಹೊಂದಿದ್ದಾರೆ. ಹೀಗೆ ಚೆಂದದ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ತೆಲುಗು ಹಾಗೂ ಕನ್ನಡ ಅಭಿಮಾನಿಗಳ ಜೊತೆ ಎಂಗೇಜ್ ಆಗಿರುತ್ತಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ