ದಾವಣಗೆರೆ: ಸಭೆಗೆ ಬರೋಕೆ ಮಾತ್ರ ಪ್ರೆಗ್ನೆಂಟ್ ಇರ್ತಾರೆ, ಗಿಂಬಳ ತೆಗೆದುಕೊಳ್ಳುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಚನ್ನಗಿರಿಯಲ್ಲಿ (Channagiri) ನಡೆದ ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಈ ಹಿನ್ನೆಲೆ ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೀಟಿಂಗ್ ಬನ್ನಿ ಅಂದ್ರೆ ಪ್ರೆಗ್ನೆಂಟ್ ಇದೀನಿ ಅಂತಾ ಹೇಳ್ತಾರೆ. ಅದೇ ಗಿಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಪ್ರೆಗ್ನೆಂಟ್ ಇರಲ್ವಾ ಎಂದು ಪ್ರಶ್ನಿಸಿದ್ದಾರೆ. ಪ್ರತಿ ಬಾರಿ ಚಕಪ್‌ಗೆ ಹೋಗಿದೀನಿ, ಅಲ್ಲಿ ಹೋಗಿದೀನಿ, ಇಲ್ಲಿ ಹೋಗಿದೀನಿ ಎಂದು ಹೇಳ್ತಾರೆ. ಪ್ರೆಗ್ನೆಂಟ್ ಇದ್ದರೆ ರಜೆ ತೆಗೆದುಕೊಳ್ಳಿ. ಈ ತರ ಹೇಳೋಕೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್
ಡೆಲಿವರಿ ಲಾಸ್ಟ್ ಡೇಟ್‌ವರೆಗೂ ಡ್ಯೂಟಿ ಬೇಕು, ಸಂಬಳ ಬೇಕು, ಗಿಂಬಳ ಬೇಕು. ಆದರೆ ಡ್ಯೂಟಿ ಮಾಡಕ್ಕೆ ಆಗಲ್ಲ. ಮಾತು ಎತ್ತಿದ್ರೆ ಪ್ರೆಗ್ನೆಂಟ್ ಅಂತೀರಾ, ನಾಚಿಕೆ ಆಗಲ್ವಾ? ರಜೆ ಹಾಕ್ಕೊಳ್ಳಿ, ಪ್ರೆಗ್ನೆನ್ಸಿ ರಜೆ ಇದೆಯಲ್ಲ. ಇದಕ್ಕೆ ಇಮಿಡಿಯಟ್ ಆಕ್ಷನ್ ತಗೋಬೇಕು, ನೋಟಿಸ್ ಕಳುಹಿಸಿ ಎಂದು ಸೂಚನೆ ನೀಡಿದ್ದಾರೆ.
ಸದ್ಯ ಶಾಸಕ ಶಿವಗಂಗಾ ಬಸವರಾಜ್ ಅವರ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗರ್ಭಿಣಿ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ:ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್