ನವದೆಹಲಿ: ಮೇಕ್ ಅಮೆರಿಕ ಗ್ರೇಟ್ ಅಗೇನ್ (MAGA) ಅಂತಿದ್ದ ಟ್ರಂಪ್‌ಗೆ ಗೂಗಲ್ (Google) ಸಿಇಓ ಸುಂದರ್ ಪಿಚೈ ಟಕ್ಕರ್ ಕೊಟ್ಟಿದ್ದಾರೆ. ಭಾರತದಲ್ಲಿ (India) ಮೊದಲ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಹಬ್‌ಗಾಗಿ ಗೂಗಲ್ ಬರೋಬ್ಬರಿ 1500 ಕೋಟಿ ರೂ. ಡಾಲರ್ ಹೂಡಿಕೆ ಮಾಡುತ್ತಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ನಿರ್ಮಾಣವಾಗಲಿರುವ ಎಐ ಹಬ್‌ಗಾಗಿ ಯೋಜನೆಗಳ ಬಗ್ಗೆ ಸುಂದರ್ ಪಿಚೈ ಪ್ರಧಾನಿ ಮೋದಿಗೆ (PM NarendraModi) ವಿವರಣೆ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಗೂಗಲ್ ಕಾರ್ಯಕ್ರಮದಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಐಟಿ ಸಚಿವ ಎನ್ ಲೋಕೇಶ್ ಸಮ್ಮುಖದಲ್ಲಿ ಗೂಗಲ್ ಈ ಘೋಷಣೆ ಮಾಡಿದೆ.
Delighted by the launch of the Google AI Hub in the dynamic city of Visakhapatnam, Andhra Pradesh.
This multi-faceted investment that includes gigawatt-scale data center infrastructure, aligns with our vision to build a Viksit Bharat. It will be a powerful force in… https://t.co/lbjO3OSyMy
— Narendra Modi (@narendramodi) October 14, 2025
ಏನೇನು ಇರಲಿದೆ?
AI ಮೂಲಸೌಕರ್ಯ, ಡೇಟಾ ಕೇಂದ್ರಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೊಸ ಸಬ್‌ಸೀ ಗೇಟ್‌ವೇ ಅನ್ನು ಸಂಯೋಜಿಸುತ್ತದೆ. ಇದು ದೇಶದ ಮೊದಲ ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ. ಇದನ್ನೂ ಓದಿ: ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು
ಕ್ಲೌಡ್ ಸೇವೆಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಬೃಹತ್ ಕಂಪ್ಯೂಟಿಂಗ್ ಶಕ್ತಿ ಮತ್ತು ಕಡಿಮೆ-ಲೇಟೆನ್ಸಿ ಸಂಪರ್ಕದ ಅಗತ್ಯವಿರುವುದರಿಂದ ಡೇಟಾ ಕೇಂದ್ರಗಳು ಹೆಚ್ಚು ನಿರ್ಣಾಯಕವಾಗುತ್ತಿವೆ.
Okay Google, sync for Viksit Bharat…
#GoogleComesToAP @AshwiniVaishnaw@nsitharaman@naralokesh @bikashkoley73@ThomasOrTK @Google pic.twitter.com/WtQNAQ8Gjg— N Chandrababu Naidu (@ncbn) October 14, 2025
ಐದು ವರ್ಷಗಳ ಯೋಜನೆಯು (2026–2030) 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಎನ್ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಈ ಕೇಂದ್ರ ಅಡಾನಿಕಾನೆಕ್ಸ್ ( daniConneX) ಮತ್ತು ಏರ್‌ಟೆಲ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಉಪಕ್ರಮದ ಭಾಗವಾಗಿ, ಗೂಗಲ್ ವಿಶಾಖಪಟ್ಟಣದಲ್ಲಿ ಹೊಸ ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್‌ಗಳನ್ನು ನಿರ್ಮಿಸಲಿದೆ. ಇದು ಭಾರತದ ಇಂಟರ್ನೆಟ್ ಸಾಮರ್ಥ್ಯವನ್ನು ಸುಧಾರಿಸಲಿದೆ. ಅಷ್ಟೇ ಅಲ್ಲದೇ ಮುಂಬೈ ಮತ್ತು ಚೆನ್ನೈನಲ್ಲಿ ಅಸ್ತಿತ್ವದಲ್ಲಿರುವ ಗೇಟ್‌ವೇಗಳಿಗೆ ಪೂರಕವಾಗಿರುತ್ತದೆ.