ಜಾತಿಗಣತಿಗೆ ನಡೆಸದ ಶಿಕ್ಷಕರ ವೇತನಕ್ಕೆ ಕತ್ತರಿ – ಬಗ್ಗದೇ ಇದ್ರೆ ಅಮಾನತು ಶಿಕ್ಷೆ

Public TV
1 Min Read

– ಬೆಂಗಳೂರಿನಲ್ಲಿ ಗಣತಿಗೆ ಜನತೆ ನಿರಾಸಕ್ತಿ

ಬೆಂಗಳೂರು: ಶಿಕ್ಷಕರ ಅಸಹಕಾರದಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿಯ ಜಾತಿ ಸಮೀಕ್ಷೆಗೆ (Caste Survey) ಭಾರೀ ಹಿನ್ನಡೆ ಆಗುತ್ತಿದೆ. ಸಮೀಕ್ಷೆಗೆ ಗೈರಾದ ಶಿಕ್ಷಕರ (Teacher) ವೇತನ ಕಡಿತಕ್ಕೆ ಸರ್ಕಾರ ಮುಂದಾಗಿದೆ.

2,300 ಶಿಕ್ಷಕರು ಗಣತಿಗೆ ಗೈರಾಗಿದ್ದು, ಅವರ ವಿರುದ್ಧ ವೇತನ ಕಡಿತದ ಅಸ್ತ್ರ ಪ್ರಯೋಗ ಮಾಡಿದೆ. ಒಂದು ವೇಳೆ ಇದಕ್ಕೂ ಬಗ್ಗದಿದ್ದಲ್ಲಿ ಶಿಕ್ಷಕರನ್ನು ಅಮಾನತು ಮಾಡಲು  ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಇದನ್ನೂ ಓದಿ:  ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

 

ಗಣತಿಗೆ ಬೆಂಗಳೂರಿನಲ್ಲಿ (Bengaluru) ಅಪಾರ್ಟ್‌ಮೆಂಟ್‌ ನಿವಾಸಿಗಳು ಇನ್ನೂ ಸ್ಪಂದಿಸಿಲ್ಲ. ಇದುವರೆಗೆ ಶೇ.29ರಷ್ಟು ಸರ್ವೆ ಆಗಿದ್ದು, ಇನ್ನೂ 39 ಲಕ್ಷ ಮನೆಗಳ ಸರ್ವೆ ಬಾಕಿ ಉಳಿದಿದೆ. ಹೀಗಾಗಿ ಬೆಂಗಳೂರಿನ ಶಾಸಕರು ಮತ್ತು ಸಂಸದರ ಸಹಕಾರ ಕೊರಲು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ನಿರ್ಧರಿಸಿದ್ದಾರೆ.

ಈ ನಡುವೆ ಸಮೀಕ್ಷೆಗೆ ಹೋದವರಿಗೆ ನಾಯಿ ಕಾಟ ಜಾಸ್ತಿಯಾಗಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿ ಇಬ್ಬರು ಗಣತಿದಾರರಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕೋಲಾರದಲ್ಲಿ ಸಮೀಕ್ಷೆಗೆ ತೆರಳಿದ್ದ ಬಿ.ಹೊಸಹಳ್ಳಿ ಶಾಲಾ ಶಿಕ್ಷಕಿ ಅಕ್ತರ್ ಬೇಗಂ ನಾಪತ್ತೆಯಾಗಿದ್ದಾರೆ. ಶಿಕ್ಷಕಿಗಾಗಿ ಕುಟುಂಬಸ್ಥರು ಹುಡುಕಾಡುತ್ತಿದ್ದಾರೆ.

Share This Article