ನಾಳೆಯಿಂದ ಎರಡು ದಿನ ಕಲ್ಯಾಣ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಪ್ರವಾಸ

Public TV
2 Min Read

ಬೆಂಗಳೂರು: ನಾಳೆಯಿಂದ ಎರಡು ದಿನ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Niramala Sitharaman) ಅವರು  ಪ್ರವಾಸ ಕೈಗೊಂಡಿದ್ದಾರೆ.

ಅ.15ರಿಂದ ಎರಡು ದಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಕಿರುತೆರೆ ನಟ, ನಟಿಯರು ಸೇರಿ 139 ಜನಕ್ಕೆ ಸೈಟ್‌ ಕೊಡಿಸೋದಾಗಿ ವಂಚನೆ

ಈ ವೇಳೆ ರೈತ ಪ್ರಮುಖರು, ರೈತ ಕೇಂದ್ರಗಳು, ಕೃಷಿ ತರಬೇತಿ ಕೇಂದ್ರಗಳು, ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳಿಗೆ ಭೇಟಿ ನೀಡಿ, ಸಂವಾದ ನಡೆಸಲಿದ್ದಾರೆ. ಕೇಂದ್ರಕ್ಕೆ ಎನ್‌ಡಿಆರ್‌ಎಫ್ ನೆರೆ ಪರಿಹಾರ ಕೋರಿ ರಾಜ್ಯದಿಂದ ಪತ್ರ ಬರೆಯಲು ಸಿದ್ಧತೆ ಬೆನ್ನಲ್ಲೇ ವಿತ್ತ ಸಚಿವೆ ರಾಜ್ಯ ಭೇಟಿ ಕೈಗೊಂಡಿದ್ದಾರೆ.

ಇನ್ನೂ ಈ ಕುರಿತು ನಿರ್ಮಲಾ ಸೀತಾರಾಮನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಸಕ್ಕೆ ಹೊರಡುತ್ತಿದ್ದೇನೆ. ಅಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸದರಿ ರೈತರ ತರಬೇತಿ ಕೇಂದ್ರ ಮತ್ತು ಕಾಮನ್ ಫೆಸಿಲಿಟಿ ಸೆಂಟರ್‌ಗಳನ್ನು ಭೇಟಿಯಾಗಿ ಅವುಗಳ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಲಿದ್ದೇನೆ.

ನನ್ನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಬಳಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತಲಾ ಒಂದು ಘಟಕವನ್ನು ಸ್ಥಾಪಿಸಲಾಗಿದೆ.

  1. ವಿಜಯನಗರ: ಕಡಲೆ ಬೇಳೆ, ಹುರಿದ ಕಡಲೆ, ಕಡಲೆ ಚಿಕ್ಕಿ, ಬೀಜ ತೆಗೆಯಲ್ಪಟ್ಟ ಹುಣಸೆ ಬ್ಲಾಕ್ ಮತ್ತು ಹುಣಸೆ ಪಲ್ಪ್ (ಕಡಲೆ – 200 ಕೆ.ಜಿ/ಗಂ.; ಹುಣಸೆ – 100 ಕೆ.ಜಿ/ಗಂ.)
  2. ಬಳ್ಳಾರಿ: ಮೆಣಸಿನ ಪುಡಿ ಮತ್ತು ಮೆಣಸಿನ ಫ್ಲೇಕ್ಸ್ (250 ಕೆ.ಜಿ/ಗಂ.)
  3. ಕೊಪ್ಪಳ: ಹಣ್ಣಿನ ಪಲ್ಪ್, ಹಣ್ಣಿನ ಜ್ಯೂಸ್ ಮತ್ತು ಅಮಚೂರ್ ಪುಡಿ (500 ಕೆ.ಜಿ/ಗಂ.)
  4. ರಾಯಚೂರು: ಚಿಲಾ ಪ್ರೀಮಿಕ್ಸ್,ಕಡ್ಲೆ ಬೇಳೆ ಹಾಗೂ ತೊಗರಿ ದಾಲ್ ಮಿಲ್ (350 ಕೆ.ಜಿ/ಗಂ.)
  5. ಯಾದಗಿರಿ: ಕಡಲೆ ಬೆಣ್ಣೆ, ಹುರಿದ ಕಡಲೆ ಮತ್ತು ಕಡಲೆ ಎಣ್ಣೆ (300 ಕೆ.ಜಿ/ಗಂ.)
  6. ಕಲಬುರಗಿ: ಸಿರಿಧಾನ್ಯ ಫ್ಲೇಕ್ಸ್, ಪಾಪ್ಸ್, ಹಿಟ್ಟು ಮತ್ತು ಸಂಪೂರ್ಣ ಸಿರಿಧಾನ್ಯಗಳು (500 ಕೆ.ಜಿ/ಗಂ.)
  7. ಬೀದರ್: ಸೋಯಾಬೀನ್ ಟೋಫು ಮತ್ತು ಸೋಯಾ ಹಾಲು (300 ಕೆ.ಜಿ/ಗಂ.)

ಈ ಪ್ರವಾಸದ ಸಮಯದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಘಟಕಗಳ ಉದ್ಘಾಟನೆ ಮಾಡಲಾಗುತ್ತದೆ. ಈ ಕೃಷಿ ಸಂಸ್ಕರಣೆ ಕೇಂದ್ರಗಳಿಂದ ತರಬೇತಿ ಪಡೆದ ರೈತರು ಮತ್ತು ಲಾಭ ಪಡೆಯುವ ರೈತರು ಹಾಗೂ ರೈತರ ಉತ್ಪಾದಕರ ಸಂಘಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಮಂಗಳವಾರ (ಅ.14) ಧಾರವಾಡದಲ್ಲಿ ನಡೆಯಲಿರುವ ಉದ್ಘಾಟನೆಯೊಂದರಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಏಕಕಾಲಕ್ಕೆ 4 ಕಡೆ ಲೋಕಾಯುಕ್ತ ದಾಳಿ – ಭ್ರಷ್ಟ ಅಧಿಕಾರಿಗೆ ಶಾಕ್ ಶಾಕ್‌

Share This Article