ನೆಲಮಂಗಲ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ 17ರ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿ (Madanayakanahalli) ಠಾಣಾ ವ್ಯಾಪ್ತಿಯ ಕಿತ್ತನಹಳ್ಳಿಯ ಬೋಳಾರೆ ಕ್ವಾರೆಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ (Kamakshipalya) ಕಾವೇರಿಪುರ ನಿವಾಸಿ ಪೃತ್ವಿಕ್ (17) ಮೃತ ಬಾಲಕ. ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ | ಡ್ರಾಪ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅರೆಸ್ಟ್
ಭಾನುವಾರ (ಅ.12) ಮಧ್ಯಾಹ್ನ ಮೃತ ಬಾಲಕ ಸೇರಿ ಒಟ್ಟು ಆರು ಸ್ನೇಹಿತರು ಈಜಾಡಲು ಬೋಳಾರೆ ಕ್ವಾರೆಗೆ ತೆರಳಿದ್ದರು. ಈ ವೇಳೆ ಈಜು ಬಾರದಿದ್ದರೂ ಕೂಡ ಸ್ನೇಹಿತರು ಒತ್ತಾಯ ಮಾಡಿದ್ದಾರೆ. ಒತ್ತಾಯಕ್ಕೆ ಮಣಿದ ಮೃತ ಬಾಲಕ ಕ್ವಾರೆಗೆ ಇಳಿದು, ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ಕಂಡ ಆತನ ಸ್ನೇಹಿತರು ಭಯದಿಂದ ಸ್ಥಳದಿಂದ ಪರಾರಿಯಾಗಿದ್ದಾರೆ.
ಸದ್ಯ ಮೃತ ಬಾಲಕನ ಪೋಷಕರು ಸ್ನೇಹಿತರಿಂದಲೇ ತಮ್ಮ ಮಗ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದು, ಬಾಳಿ ಬದುಕಬೇಕಿದ್ದ ಬಾಲಕ ಹುಡುಗರ ಸಹವಾಸದಿಂದ ಸಾವನ್ನಪ್ಪಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ನಿಯಂತ್ರಣ ತಪ್ಪಿ ಕ್ರೂಸರ್ ಮರಕ್ಕೆ ಡಿಕ್ಕಿ – ಇಬ್ಬರು ಸಾವು, 8 ಮಂದಿ ಗಂಭೀರ