ಪ್ರಿಯಾಂಕ್ ಖರ್ಗೆ RSS ಬಗ್ಗೆ ಸಿಎಂಗೆ ಪತ್ರ ಬರೆದಿರೋದು ನನಗೆ ಗೊತ್ತಿಲ್ಲ: ಪರಮೇಶ್ವರ್‌

Public TV
1 Min Read
  • RSS ನಿಷೇಧದ ಬಗ್ಗೆ ಗೃಹ ಇಲಾಖೆಗೆ ಪ್ರಸ್ತಾವನೆ ಬಂದರೆ ಪರಿಶೀಲನೆ

ಬೆಂಗಳೂರು: ಪ್ರಿಯಾಂಕ್ ಖರ್ಗೆ (Priyank Kharge) RSS ಕಾರ್ಯಕ್ರಮಗಳನ್ನ ನಿಷೇಧ ಮಾಡಬೇಕು ಅಂತ ಸಿಎಂಗೆ ಪತ್ರ ಬರೆದಿರೋದು ನನಗೇನು ಗೊತ್ತಿಲ್ಲ. ಗೃಹ ಇಲಾಖೆಗೆ ಆ ಪತ್ರ ಬಂದರೆ ಪರಿಶೀಲನೆ ಮಾಡುತ್ತೇವೆ ಅಂತ ಗೃಹ ಸಚಿವ ಪರಮೇಶ್ವರ್‌ (G Parameshwar) ತಿಳಿಸಿದರು.

RSS ಬ್ಯಾನ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪತ್ರ ಬರೆದಿರೋದು ಎಲ್ಲವೂ ನಿಮಗೆ ಗೊತ್ತಿದೆಯಲ್ಲ. ನೀವೇ ಹೇಳಿದಂತೆ ಅವರು ಪತ್ರ ಬರೆದಿದ್ದಾರೆ. ಶಾಲೆ, ಸರ್ಕಾರಿ ಜಾಗದಲ್ಲಿ ಬೇಡ ಅಂತ ಹೇಳಿದ್ದಾರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅವರು ಅದರ ಬಗ್ಗೆ ಚರ್ಚೆ ಮಾಡ್ತಾರೇನೋ, ಸಿಎಸ್ ಅವರು ನಿರ್ಧಾರ ತೆಗೆದುಕೊಳ್ತಾರೆ ಅಂತ ಹೇಳಿದರು.

ಈ ಬಗ್ಗೆ ನಮ್ಮ ಇಲಾಖೆಗೆ ಬಂದರೆ ಪರಿಶೀಲನೆ ಮಾಡ್ತೇವೆ. ಅದರ ಸಾಧಕ ಬಾಧಕ ಪರಿಶೀಲನೆ ಮಾಡ್ತೇವೆ. ದೂರು ಬಂದರೆ ಮಾಡಬಹುದು. ವೈಯುಕ್ತಿಕವಾಗಿ ನನ್ನ ಅಭಿಪ್ರಾಯ ಯಾಕೆ ಹೇಳಬೇಕು? ಎಂದರು.

ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೆ? ಮೆರವಣಿಗೆ ಬರ್ತಿತ್ತು ಕೈಮುಗಿದೆ. ಅಬ್ಬಕ್ಕನಿಗೆ ಕೈಮುಗಿಯೋದು ತಪ್ಪೇ?ಅದನ್ನೇ ತಪ್ಪು ಅಂದ್ರೆ ಹೇಗೆ? ಅವತ್ತೇ ಕ್ಲಾರಿಪಿಕೇಶನ್ ಕೊಟ್ಟಿದ್ದೇನೆ. ಇವತ್ತು ನಾನು ಕೊಡ್ತಿದ್ದೇನೆ. ನನಗೆ ಪರ್ಮಿಷನ್ ಕೇಳಿದ್ರೆ ಪೊಲೀಸರು ಕೊಡ್ತಾರೆ. ಸರ್ಕಾರ ಬ್ಯಾನ್ ಮಾಡಿದ್ರೆ ಕೊಡಲ್ಲ. ಇನ್ನೂ ಏನು ಬ್ಯಾನ್ ಆಗಿಲ್ಲವಲ್ಲ. ನಮ್ಮ ಇಲಾಖೆಗೆ ಫಾರ್ವರ್ಡ್ ಮಾಡಬೇಕು. ಆಗ ನಾವು ನೋಡ್ತೇವೆ ಅಂತ ತಿಳಿಸಿದರು.

Share This Article