ನವದೆಹಲಿ: ದೆಹಲಿಯಲ್ಲಿ ಅಫ್ಘಾನ್ (Afghanistan) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿವಾದದ ಬಗ್ಗೆ ತಾಲಿಬಾನ್ (Taliban) ಸ್ಪಷ್ಟನೆ ನೀಡಿದೆ. ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತರನ್ನು (Woman Journalists) ತಡೆಯಲಿಲ್ಲ ಎಂದು ತಾಲಿಬಾನ್ ತಿಳಿಸಿದೆ.
ಇದು ‘ತಾಂತ್ರಿಕ ಸಮಸ್ಯೆ’ ಹೊರತು ಉದ್ದೇಶಪೂರ್ವಕವಲ್ಲ. ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಇದು ಅಲ್ಪಾವಧಿಯ ಸೂಚನೆಯಾಗಿತ್ತು. ಇನ್ನು ಪತ್ರಕರ್ತರ ಸಣ್ಣ ಪಟ್ಟಿಯನ್ನು ನಿರ್ಧರಿಸಲಾಗಿತ್ತು. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅಮೀರ್ ಖಾನ್ ಮುತ್ತಕಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಂಗಾಳದ ಬರ್ಧಮಾನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಹಲವರಿಗೆ ಗಾಯ
ಮುತ್ತಕಿ ಸ್ವತಃ ಮಹಿಳಾ ಪತ್ರಕರ್ತರನ್ನು ನಿಯಮಿತವಾಗಿ ಭೇಟಿಯಾಗುತ್ತಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಹೀಗಿರುವಾಗ ಭಾರತದಲ್ಲಿ ಮಹಿಳೆಯ ಪ್ರಶ್ನೆಗೆ ಅವರು ಏಕೆ ಆಕ್ಷೇಪಿಸುತ್ತಾರೆ? ಅಂತ ತಾಲಿಬಾನ್ ರಾಜಕೀಯ ಮುಖ್ಯಸ್ಥ ಸುಹೇಲ್ ಶಾಹಿ ಹೇಳಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ
ಮಹಿಳಾ ಪತ್ರಕರ್ತರನ್ನು ಹೊರಗಿಟ್ಟಿರವುದು ಭಾರತೀಯ ಮಹಿಳೆಗೆ ಮಾಡಿದ ಅವಮಾನ. ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆ ಸರಿಯಲ್ಲ; ಅಫ್ಘಾನ್ ರಾಯಭಾರಿಗೆ ಪಾಕಿಸ್ತಾನ ಸಮನ್ಸ್