– ಯಡಿಯೂರಪ್ಪ ಕುಟುಂಬದ ಜೊತೆ ನನ್ನ ಸಂಧಾನ ಇಲ್ಲ: ಶಾಸಕ ಸ್ಪಷ್ಟನೆ
ಮಂಡ್ಯ: ಪ್ರಿಯಾಂಕ್ ಖರ್ಗೆ ಅಪ್ಪನಿಗೆ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡಲು ಆಗಲಿಲ್ಲ. ಇನ್ನು ಅವನಿಂದ ಆಗುತ್ತಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಟಾಂಗ್ ಕೊಟ್ಟರು.
ಮಂಡ್ಯದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ (Priyank Kharge) ಶತಮೂರ್ಖ. ನೆಹರೂ, ಇಂದಿರಾ ಗಾಂಧಿಗೆ ಆರ್‌ಎಸ್‌ಎಸ್ ನಿಷೇಧ ಮಾಡಲು ಆಗಲಿಲ್ಲ. ಮುಸ್ಲಿಮರನ್ನು ಖುಷಿಪಡಿಸಲು ಈ ಬಚ್ಚಾ ಏನೇನೋ ಮಾತಾಡ್ತಾನೆ. ಸೂರ್ಯ, ಚಂದ್ರ ಇರೋವರೆಗೂ ಆರ್‌ಎಸ್‌ಎಸ್ ಇರುತ್ತದೆ. ಸಿದ್ದರಾಮಯ್ಯ ಮಗ ಯತೀಂದ್ರ, ಜತೀಂದ್ರ, ಹರಿಪ್ರಸಾದ್ ಪಾಕಿಸ್ತಾನ್ ಏಜೆಂಟ್ ರೀತಿ ಮಾತಾಡ್ತಾರೆ. ಯತೀಂದ್ರ ಏನು ಮಾತಾಡ್ತಾನೆ ಗೊತ್ತೆ ಆಗಲ್ಲ. ಪ್ರಿಯಾಂಕ್ ಖರ್ಗೆ ಅಪ್ಪನಿಗೆ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಆಗಲಿಲ್ಲ, ಅವನಿಗೆ ಆಗುತ್ತಾ? ಮುಸ್ಲಿಮರ ರೀತಿ ಆರ್‌ಎಸ್‌ಎಸ್ ಏನನ್ನೂ ಕಬ್ಜಾ ಮಾಡಿಲ್ಲ. ಶಾಖೆ ನಡೆಸಿ ಭಾರತದ ಮಾತೆಗೆ ಪ್ರಾರ್ಥನೆ ಮಾಡಿ ಹೋಗ್ತಾರೆ. ಮಸೀದಿ ಆದಾಯ ಸರ್ಕಾರಕ್ಕೆ ಬರಲ್ಲ. ಪ್ರಿಯಾಂಕ್ ಖರ್ಗೆ ಇನ್ನೆರಡು ವರ್ಷ ಹಾರಾಡು. ಆಮೇಲೆ ಹಿಂದೂ ಸರ್ಕಾರ ಬರಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ ಎಲ್ಲಾ ಚಟುವಟಿಕೆ ಬ್ಯಾನ್?
ಸಿದ್ದರಾಮಯ್ಯ ಕೆಳಗಿಳಿಸುವುದು ಸುಲಭವಲ್ಲ. ನವೆಂಬರ್ ಕ್ರಾಂತಿ ಆಗಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ. ಡಿಕೆಶಿ ಬಿಜೆಪಿ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಿಂದೆ ಡಿಕೆಶಿಯನ್ನ ಬಿಜೆಪಿಗೆ ಕರೆತರುವ ಪ್ಲಾನ್ ಇತ್ತು. ನಾನು ಉಚ್ಚಾಟನೆ ಆದ ದಿನ ರಾಷ್ಟ್ರೀಯ ನಾಯಕರೊಬ್ಬರು ನನಗೆ ಕರೆ ಮಾಡಿದ್ದರು. ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ ಆಗುವ ಪ್ಲಾನ್ ನಡೆಯುತ್ತಿದೆ ಎಂದಿದ್ದರು. 90 ಶಾಸಕರನ್ನ ಕರೆತರುತ್ತಾರೆ ಅಂದುಕೊಂಡಿದ್ರು. ಆದರೆ, 15 ಜನ ಶಾಸಕರಷ್ಟೇ ಡಿಕೆಶಿ ಪರ ಅಂತ ಗೊತ್ತಾದಮೇಲೆ ಪ್ಲಾನ್ ಕೈಬಿಟ್ರು ಎಂದು ಲೇವಡಿ ಮಾಡಿದರು.
ರಾಜಕಾರಣದಲ್ಲಿ ಮಾಟಮಂತ್ರ ಮಾಡುವವರು ಇದ್ದಾರೆ. ಬಿಜೆಪಿಯಲ್ಲಿ ಮಾಟಮಂತ್ರ ಮಾಡುವ ಒಂದು ಕುಟುಂಬ ಇದೆ. ಯತ್ನಾಳ್ ಹಾಳಾಗಲಿ ಎಂದು ಪೂಜೆ ಮಾಡಿಸಿ ಬರ್ತಾರೆ. ಆದರೆ ನನಗೆ ಯಾವುದೇ ಮಾಟಮಂತ್ರ ತಗುಲುವುದಿಲ್ಲ. ಕುಮಾರಸ್ವಾಮಿ ಆರೋಗ್ಯ ಹಾಳಾಗಲು ಮಾಟಮಂತ್ರ ಕಾರಣ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ನವೆಂಬರ್ ಕ್ರಾಂತಿ ಏನು ಗೊತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಆಗಬಹುದು. ಶಾಸಕರಲ್ಲಿ ಅಸಮಾಧಾನ ಇದೆ. ಅಭಿವೃದ್ಧಿಗೆ ಹಣ ಸಿಗ್ತಿಲ್ಲ, ಅಸಮಾಧಾನ ಇದೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆನೇ ಕ್ರಾಂತಿ. ಮೂಲ ಬಿಜೆಪಿ ಇವರ ಕೈನಲ್ಲಿದ್ದಾರೆ ಎಂದರು.
ನನ್ನ ಉಚ್ಚಾಟನೆ ಮಾಡಿದ್ದು ಬಿಜೆಪಿಯೇ ಹೊರತು ಜನರಲ್ಲ. ಹಿಂದೂಗಳ ಮತಗಳ ವಿಭಜನೆ ನನ್ನ ಉದ್ದೇಶ ಅಲ್ಲ. ಹೊಸ ಪಕ್ಷ ಕಟ್ಟಿದ್ರೆ ನಮಗೆ ಲಾಭ ಎಂದು ಸಿದ್ದರಾಮಯ್ಯ ಹೇಳಿದ್ರು. ಒಂದು ಕುಟುಂಬ ಇಲ್ಲದಿದ್ರೆ ಬಿಜೆಪಿ ಮುಳುಗುತ್ತದೆ ಎಂಬ ಭಾವನೆ ಬಿತ್ತಿದ್ರು. ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಮುಳುಗತ್ತದೆ ಎಂಬ ಭಾವನೆ ಹೈಕಮಾಂಡ್‌ಗೆ ತರಿಸಿದ್ರು. ಆದರೆ ಈ ಬಾರಿಯ ಗಣೇಶೋತ್ಸವದಿಂದ ಭಾವನೆ ಬದಲಾಗಿದೆ. ಯುಪಿ ಯೋಗಿ ಮಾದರಿಯ ಬಿಜೆಪಿಯನ್ನ ರಾಜ್ಯದ ಜನರು ಬಯಸುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಜೊತೆ ನನ್ನ ಸಂಧಾನ ಇಲ್ಲ. ಒಂದಿಬ್ಬರು ಬಿಜೆಪಿ ಎಂಪಿ ಬಿಟ್ಟರೆ ಎಲ್ಲರೂ ನನ್ನ ಉಚ್ಚಾಟನೆಗೆ ವಿರೋಧವಿದೆ. ಹಿಂದೂಗಳ ಸಂಘಟನೆ ನನ್ನ ಗುರಿ. ಹಿಂದೂಗಳ ಪರವಾಗಿ ಗಟ್ಟಿಧ್ವನಿ ಬೇಕಾಗಿದೆ. ಅದಕ್ಕಾಗಿ ರಾಜ್ಯ ಪ್ರವಾಸ ಮಾಡ್ತಿದ್ದೇನೆ ಎಂದು ತಿಳಿಸಿದರು.