ಆರ್‌ಎಸ್‌ಎಸ್ ವಿಷಪೂರಿತ ಸಿದ್ಧಾಂತ ಹರಡುವ ಕೆಲಸ ಮಾಡಬಾರದು: ಯತೀಂದ್ರ ಸಿದ್ದರಾಮಯ್ಯ

Public TV
1 Min Read

ರಾಯಚೂರು: ಸಾರ್ವಜನಿಕ ಸ್ಥಳಗಳಲ್ಲಿ ಏನೇ ಬೈಠಕ್ ಮಾಡಬೇಕೆಂದರೂ ಪೂರ್ವಾನುಮತಿ ಪಡಿಯಬೇಕು. ಆರ್‌ಎಸ್‌ಎಸ್‌ನವರು (RSS) ಯಾವುದೇ ಪೂರ್ವಾನುಮತಿಯಿಲ್ಲದೆ ಕಾರ್ಯಕ್ರಮ ಮಾಡುತ್ತಾರೆ. ಯಾರೂ ಹೇಳುವವರಿಲ್ಲ ಕೇಳುವವರಿಲ್ಲ ಅಂತ ಇಷ್ಟು ದಿನ ಮಾಡಿಕೊಂಡು ಬಂದುಬಿಟ್ಟಿದ್ದಾರೆ. ಹಾಗಾಗಿ ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಸುವುದಕ್ಕೆ ತೀವ್ರ ಆಕ್ಷೇಪ ವಿಚಾರಕ್ಕೆ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪಾರ್ಕ್‌ಗಳಲ್ಲಿ ಸುಮ್ಮನೆ ಸಭೆಗಳನ್ನ ಮಾಡುವುದು, ಅವರ ವಿಷಪೂರಿತವಾದ ಸಿದ್ಧಾಂತಗಳನ್ನ ಹರಡುವ ಕೆಲಸಗಳನ್ನ ಮಾಡಬಾರದು. ಅವರು ಸುಮ್ನೆ ಮಾಮೂಲಾಗಿ ಕಾರ್ಯಕ್ರಮಗಳನ್ನ ಮಾಡಲ್ಲ. ಹಾಗಾಗಿ ಅದಕ್ಕೆ ಕಡಿವಾಣ ಹಾಕಬೇಕು. ಅನುಮತಿ ಪಡೆದು ಕಾರ್ಯಕ್ರಮ ಮಾಡಲಿ ಎಂದರು. ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆ ಸರಿಯಲ್ಲ; ಅಫ್ಘಾನ್‌ ರಾಯಭಾರಿಗೆ ಪಾಕಿಸ್ತಾನ ಸಮನ್ಸ್‌

ಆರ್‌ಎಸ್‌ಎಸ್‌ನವರು ಭಾರತದ ತಾಲಿಬಾನಿಗಳು ಅನ್ನೋ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸಿದ್ದರಾಮಯ್ಯ ಆರ್‌ಎಸ್‌ಎಸ್‌ನವರು ತಮ್ಮದು ದೊಡ್ಡ ಸಂಸ್ಥೆ ಅಂತ ಹೇಳುತ್ತಾರೆ, ಆದ್ರೂ ಕೂಡ ರಿಜಿಸ್ಟ್ರೇಷನ್ ಮಾಡಿಕೊಳ್ಳಲ್ಲಾ ಅಂದ್ರೆ ಅದು ಬಹಳ ಸೂಜಿಗದ ವಿಷಯ. ಅದು ಪರಿಶೀಲನೆ ಮಾಡಬೇಕು, ರಿಜಿಸ್ಟ್ರೇಷನ್ ಆಗಬೇಕು ಅಂದರೆ ಆಗಬೇಕು. ತಾಲಿಬಾನಿಗಳ ಮೈಂಡ್ ಸೆಟ್, ಆರ್‌ಎಸ್‌ಎಸ್ ಮೈಂಡ್ ಸೆಟ್ ಅಷ್ಟೇ ಇದೆ. ಧರ್ಮವನ್ನ ಸಂಕುಚಿತ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಬಂದ್ರೆ 100% ಆರ್‌ಎಸ್‌ಎಸ್‌ ಬ್ಯಾನ್‌: ಎಂ. ಲಕ್ಷ್ಮಣ್‌

Share This Article