ಕಾಂತಾರ (Kantara Chapter 1) ಸಿನಿಮಾ ಬಾಕ್ಸಾಪೀಸ್ನಲ್ಲಿ ಅದ್ಧೂರಿಯಾಗಿ ಗಳಿಕೆ ಮಾಡುತ್ತಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ತೆರೆಕಂಡ ಕಡೆಗೆಲ್ಲ ಭಾಷೆ ಮೀರಿ ಯಶಸ್ಸಿನ ನಾಗಾಲೋಟ ಮುಂದುವರೆಸಿದೆ. ಇದರ ಬೆನ್ನಲ್ಲೇ ರಿಷಬ್ ಮುಂಬೈನ (Mumbai) ಥಿಯೇಟರ್ಗೆ ಗೈಟಿ ಗ್ಯಾಲಕ್ಸಿ ಥಿಯೇಟರ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳು ಅವರ ಮೇಲೆ ಹೂಚೆಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ರಿಷಬ್ ಶೆಟ್ಟಿ ಕಾರ್ನ ಸನ್ರೂಪ್ನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಥಿಯೇಟರ್ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ರಿಷಬ್ ಅವರನ್ನ ವಿಭಿನ್ನವಾಗಿ ಸ್ವಾಗತ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾ ಬಾಕ್ಸಾಫೀಸ್ನಲ್ಲಿ 600ಕ್ಕೂ ಅಧಿಕ ಕೋಟಿ ಗಳಿಕೆ ಮಾಡಿ, ಮುನ್ನುಗ್ಗುತ್ತಿದೆ. ಇದನ್ನೂ ಓದಿ: 1 ಕೋಟಿ ಟಿಕೆಟ್ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ
ಬಹುಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ದೇಶ-ವಿದೇಶದಲ್ಲಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ತೆರೆಕಂಡು ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಆದರೆ ಒಂದು ಕಡೆ ಈ ಸಿನಿಮಾದಲ್ಲಿ ತೋರಿಸಿಲಾದ ದೈವದ ಕುರಿತಾಗಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ಚಿತ್ರತಂಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಗುತ್ತಿದೆ. ಇದನ್ನೂ ಓದಿ: ಎರಡೂವರೆ ಗಂಟೆ ಕಾರು ಚಲಾಯಿಸಿಕೊಂಡು ಹೋಗಿ ‘ಕಾಂತಾರ ಚಾಪ್ಟರ್ 1’ ನೋಡಿದ ಅಟ್ಲೀ