ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 (Kantara: Chapter 1) ಟಿಕೆಟ್ ಬುಕ್ಕಿಂಗ್ ಮಾಡುವ ಬುಕ್ಮೈಶೋದಲ್ಲಿ (BookMyShow) 1 ಕೋಟಿ ಟಿಕೆಟ್ ಮಾರಾಟವಾಗಿದೆ.
When cinema turns divine, the entire country feels the goosebumps 🔥 pic.twitter.com/S0DvZfbQ6Y
— BookMyShow (@bookmyshow) October 12, 2025
ಅಕ್ಟೋಬರ್ 2 ರಂದು ಕಾಂತಾರ ಬಿಡುಗಡೆಯಾಗಿದ್ದು ಈಗಲೂ ಪ್ರೇಕ್ಷಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ಶನಿವಾರ ಭಾನುವಾರ ಬಹುತೇಕ ಥಿಯೇಟರ್ಗಳು ಭರ್ತಿಯಾಗುತ್ತಿವೆ. ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ಥಿಯೇಟರ್ ಈಗಲೂ ಭರ್ತಿಯಾಗುತ್ತಿರುವುದು ಚಿತ್ರ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ದಿನವೇ ಬುಕ್ಮೈಶೋದಲ್ಲಿ ದಾಖಲೆ ಬರೆದ ಕಾಂತಾರ
#KantaraChapter1 emerges a HIT… As expected, the film witnessed superb growth [102.39%] on its second Saturday, further cementing its status… #Maharashtra continues to drive the business for the #Hindi version.
The Sunday numbers are expected to give its already-impressive… pic.twitter.com/l5tYbaGxaM
— taran adarsh (@taran_adarsh) October 12, 2025
ಆರಂಭದಲ್ಲಿ ಹಿಂದಿ ಕಲೆಕ್ಷನ್ ಕಡಿಮೆ ಇತ್ತು. ಆದರೆ ಈಗ ಹಿಂದಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರಿಂದಾಗಿ ಹಿಂದಿ ಕಲೆಕ್ಷನ್ 100 ಕೋಟಿ ರೂ. ಗಡಿ ದಾಟಿದೆ. ಶುಕ್ರವಾರ 7.10 ಕೋಟಿ ರೂ. ಶನಿವಾರ 14.37 ಕೋಟಿ ರೂ. ಗಳಿಸುವ ಮೂಲಕ ಒಟ್ಟು 131.57 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ: ಹಿಂದಿ ಬಿಗ್ ಶೋನಲ್ಲಿ ರಿಷಬ್ ಶೆಟ್ಟಿ – ಬಿಗ್ಬಿಗೆ ವಿಶ್ ಮಾಡಿದ ಡಿವೈನ್ ಸ್ಟಾರ್