– ಗಡಿಯಲ್ಲಿ ಭಾರೀ ಘರ್ಷಣೆ – ಮತ್ತೊಂದು ಯುದ್ಧ?
ಕಾಬೂಲ್: ಅಫ್ಘಾನಿಸ್ತಾನ (Afghanistan) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಈಗ ಯುದ್ಧದ ಭೀತಿ ಆರಂಭವಾಗಿದೆ. ಕಾಬೂಲ್ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್(Taliban) ಈಗ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದೆ.
ಅಫ್ಘಾನ್- ಪಾಕ್ ಗಡಿಯಾಗಿರುವ ಡುರಾಂಡ್ ಲೈನ್‌ನಲ್ಲಿ (Durand Line) ನಡೆದ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಸೇನೆಯ ಗಡಿಯಲ್ಲಿ ಸ್ಥಾಪಿಸಿದ್ದ 12 ಔಟ್‌ಪೋಸ್ಟಿಂಗ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
BREAKING:
The Afghan Taliban send large Humvee convoys toward the border with Pakistan as reinforcements after intense fighting breaks out between the 2 countries
🇦🇫🇵🇰🇺🇸 pic.twitter.com/paCBEe8RPD
— Visegrád 24 (@visegrad24) October 11, 2025
ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಡುರಾಂಡ್ ರೇಖೆಯಾದ್ಯಂತ ಪಾಕಿಸ್ತಾನಿ ಸೇನೆ ಹಲವಾರು ಹೊರಠಾಣೆಗಳನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ – 7 ಪೊಲೀಸರು, 6 ಉಗ್ರರು ಸಾವು
ಈ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ಪಡೆಗಳು ಡುರಾಂಡ್ ರೇಖೆಯ ಬಳಿಯ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿವೆ.
ಎರಡೂ ಮುಸ್ಲಿಮ್ ರಾಷ್ಟ್ರಗಳು ಘರ್ಷಣೆಯಲ್ಲಿ ತೊಡಗಿದ ಬೆನ್ನಲ್ಲೇ ಸೌದಿ ಅರೇಬಿಯಾ, ಕತಾರ್ ದೇಶಗಳು ಘರ್ಷಣೆಯನ್ನು ನಿಲ್ಲಿಸುವಂತೆ ಎರಡೂ ದೇಶಗಳ ಜೊತೆ ಮನವಿ ಮಾಡಿದೆ.