– ಇಲ್ಲಿ ಗೆದ್ದರೆ 2028ರ ಚುನಾವಣೆ ಗೆಲ್ಲೋಕೆ ಸಾಧ್ಯ
– ಶಾಸಕರು ಹಿಂದೆ ಓಡಾಡಿದ್ರೆ ಟಿಕೆಟ್ ಸಿಗಲ್ಲ ಅಂತ ಡಿಸಿಎಂ ವಾರ್ನಿಂಗ್
ಬೆಂಗಳೂರು: ಗ್ರೇಟರ್ ಬೆಂಗಳೂರು ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರು ಏನೇ ಅಭಿಪ್ರಾಯಗಳಿದ್ದರೂ ತಿಳಿಸಬೇಕು. 368 ವಾರ್ಡ್‌ಗಳನ್ನ ಮಾಡಲಾಗಿದ್ದು, ಚುನಾವಣೆಗೆ ಎಲ್ಲಾ ವಾರ್ಡ್‌ಗಳ ಮೇಲೆ ಗಮನಹರಿಸಬೇಕು. 50% ಮಹಿಳಾ ಮೀಸಲಾತಿ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರು ಕಾಂಗ್ರೆಸ್ ಪದಾಧಿಕಾರಿಗಳು, ನಾಯಕರು, ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಗ್ರೇಟರ್ ಬೆಂಗಳೂರು ಚುಣಾವಣೆಗೆ ಕಾಂಗ್ರೆಸ್ ಸಿದ್ಧತೆ ಕುರಿತು ಡಿಸಿಎಂ ಡಿಕೆಶಿ ಮಾತನಾಡಿದರು.
ಗ್ರೇಟರ್ ಬೆಂಗಳೂರು ಬಿಲ್ ಪಾಸಾಗಿ ಅಸ್ತಿತ್ವಕ್ಕೆ ಬಂದಿದೆ. ಆದರೆ, ಆಬ್ಜಕ್ಷನ್ ಮಾಡಲು ಇನ್ನೂ ಟೈಮ್ ಇದೆ. ಕೆಲವರು ಬರೀ ಸ್ಲಂ, ಮುಸ್ಲಿಂ ವಾರ್ಡ್ ಸೇರಿಸಿದ್ರೆ ಮಾತ್ರವೇ ಗೆಲ್ತೀವಿ ಅನ್ಕೊಂಡಿದ್ದಾರೆ. ಹಾಗೆಲ್ಲ ಗೆಲ್ಲೋಕೆ ಆಗಲ್ಲ. ಎಲ್ಲರೂ ಸೇರಿದ್ರೆ ಮಾತ್ರವೇ ಗೆಲ್ಲೋಕೆ ಸಾಧ್ಯ. ಆ ರೀತಿಯ ಯೋಚನೆ ಇದ್ದರೆ ಈಗಲೇ ಕೈಬಿಡಿ ಅಂದರು.
ಅಲ್ಲದೆ, ನಮ್ಮ ಹಣೆಬರಹ ನಮ್ಮ ಸರ್ಕಾರದ ಹಣೆಬರಹ ಐದು ಪಾಲಿಕೆ ಚುನಾವಣೆಯ ಮೇಲೆ ಇದೆ. ಇಲ್ಲಾ ಅಂದ್ರೆ ನಾವು ವಾಪಸ್ ಹಳ್ಳಿಗೆ ಹೋಗಬೇಕಾಗುತ್ತದೆ. ಇಲ್ಲಿ ಗೆದ್ದಾಗ ಮಾತ್ರವೇ 2028ರ ಚುನಾವಣೆ ಗೆಲ್ಲೋಕೆ ಸಾಧ್ಯ. ನನ್ನಿಂದೆ, ಶಾಸಕರು ಹಿಂದೆ ಓಡಾಡಿದ್ರೆ ಟಿಕೆಟ್ ಸಿಗಲ್ಲ ಅದೆಲ್ಲ ಸುಳ್ಳು. ಹೊಸ ಕಮಿಟಿ ರಚನೆಗೆ ಸೂಚನೆ ನೀಡಿದ್ದೇನೆ. ಬೇರೆಯವರ ಪಾರ್ಟಿಯಿಂದ ಲೋಕಲ್ ಅವರು ಬಂದರೆ ಸೇರಿಸಿಕೊಳ್ಳಿ. ಸರಿಯಾಗಿ ಒಂದು ಬೂತ್ ಕಂಟ್ರೋಲ್ ಮಾಡಿ ಆಗ ನಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರ್ತಿವಿ ಅಂದಿದ್ದಾರೆ.
ಅಲ್ಲದೆ, 50% ರಷ್ಟು ಮಹಿಳೆಯರಿಗೆ ಟಿಕೆಟ್ ಕೊಡಬೇಕು. ಫೆಬ್ರವರಿಗೆ ಜಿಲ್ಲಾ ಪಂಚಾಯಿತಿ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆ ಬರಲಿದೆ. ನನ್ನ ನಂಬಿಕೆ ಹೆಣ್ಮಕ್ಳು, ಯುವಕರ ಮೇಲೆ ಇದೆ. ಐದು ಪಾಲಿಕೆಯ ಐದು ಗ್ಯಾರಂಟಿಯ ಜವಾಬ್ದಾರಿಗೆ ಹೆಣ್ಮಕ್ಳನ್ನೇ ನೇಮಕ ಮಾಡಬೇಕು ಅನ್ಕೊಂಡಿದ್ದೇನೆ ಅಂತ ಡಿಕೆಶಿ ಹೇಳಿದ್ದಾರೆ. ಈ ಮಧ್ಯೆ, ಫೆಬ್ರವರಿಗೆ ಜಿಬಿಎ ಎಲೆಕ್ಷನ್ ಅಗ್ಬೋದು ಅಂತ ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.