ಆನೇಕಲ್: ಬಿಇಟಿಎಲ್ (BETL) ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿ ಹಾಗೂ ಬೇಜವಾಬ್ದಾರಿತನದಿಂದ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ಹೊಸೂರು ರಸ್ತೆ (Hosur Road) ಸಂಪೂರ್ಣವಾಗಿ ಟ್ರಾಫಿಕ್ ಜಾಮ್‌ನಿಂದ (Traffic Jam) ವಾಹನ ಸಮಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇಂದು ಸಹ ಹೊಸೂರು ರಸ್ತೆಯ ಗೆಸ್ಟ್ ಲೈನ್ ಸರ್ಕಲ್‌ನಿಂದ ಕೋನಪ್ಪನ ಅಗ್ರಹಾರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ.
ಇತ್ತೀಚಿಗೆ ಬಿಇಟಿಎಲ್ ವತಿಯಿಂದ ಗೆಸ್ಟ್ ಲೈನ್ ಸಮೀಪ ಕಾಮಗಾರಿಯೊಂದನ್ನು ಮಾಡುತ್ತಿದ್ದು, ಕಾಮಗಾರಿಗಾಗಿ ಹಳ್ಳವನ್ನು ಅಗೆಯಲಾಗಿದೆ. ಆದರೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾಂಟ್ರಾಕ್ಟರ್ ಹಾಗೂ ಬಿಇಟಿಎಲ್ ಸಂಸ್ಥೆಯಿಂದಾಗಿ ಪ್ರತಿನಿತ್ಯ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು ಬಿಇಟಿಎಲ್‌ಗೆ ಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಆರೋಗ್ಯ ವಿಚಾರಿಸಿದ ಬಿಎಸ್‌ವೈ, ವಿಜಯೇಂದ್ರ
ಅಲ್ಲದೇ ಇಂದು ವಾರಾಂತ್ಯವಾಗಿದ್ದು, ತಮಿಳುನಾಡಿನತ್ತ ತಮ್ಮ ಊರುಗಳಿಗೆ ಅನೇಕ ಮಂದಿ ಹೊರಟಿದ್ದರು. ಆದರೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಕಿರಿಕಿರಿ ಅನುಭವಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್ ಫ್ರೆಂಡ್ ಅಂತ ಪರಿಗಣಿಸ್ತಾರೆ: ಯುಎಸ್ ರಾಯಭಾರಿ