ಬೆಂಗಳೂರು: ಸಿಎಂ ಸಾಹೇಬ್ರು ಕರೆಸ್ತಾರೆ, ನಾಟಿ ಕೋಳಿ ತಿನ್ನಿಸ್ತಾರೆ. ನನಗೆ ಸೋಮವಾರ, ಮಂಗಳವಾರ ಏನಿಲ್ಲ. ನಮ್ದು ವಿಶ್ ಫುಲ್ ಥಿಂಕಿಂಗ್ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಸೋಮವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಡಿನ್ನರ್ ಮೀಟಿಂಗ್ ಆಯೋಜಿಸಿದ (Dinner Meeting) ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ನನಗೆ ಸೋಮವಾರ ಅಂತಾ ಗೊತ್ತಿರಲಿಲ್ಲ, ಅವರು ಮುದ್ದೆ ಸೊಪ್ಪು ಸಾರು ಹಾಕಿದ್ರು ಓಕೆ. ನಮ್ಮ ಸಿಎಂ ಅವರು ಊಟಕ್ಕೂ ಕರೆಯಬೇಡ ಅಂದ್ರೆ ಹೇಗೆ? ನಾಳೆ ಡಿಸಿಎಂ ಕರೆಯುತ್ತಾರೆ, ನಾನು ಕರೆಯುತ್ತೇನೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?
ಆದ್ರೆ ಹಾದಿ ಬೀದಿಯಲ್ಲಿ ಪವರ್ ಶೇರ್, ಸಂಪುಟ ಪುನಾರಚನೆ ಬಗ್ಗೆ ಮಾತಾಡಿದ್ರೆ ಮಾನ್ಯತೆ ಇಲ್ಲ. ಹೈಕಮಾಂಡ್ ಹೇಳಬೇಕು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಮಾತನಾಡಬೇಕು. ಹೈಕಮಾಂಡ್ ಯಾವಾಗ ಮಾತಾಡಬೇಕು ಮಾತಾಡುತ್ತೆ. ಬಹಿರಂಗವಾಗಿ ಮಾತನಾಡೋರಿಗೆ ನೋಟೀಸ್ ಕೊಟ್ಟಿದೆ. ಇನ್ನೂ ಕೊಡ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಾಂಬೆ ಮಾದರಿಯಲ್ಲಿ ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚನೆಗೆ ಸೂಚನೆ: ಡಿಕೆಶಿ