ಚಾಮುಂಡಿ ತಾಯಿಗೆ ಮುಡಿ ಉತ್ಸವ; ರಾಜರ ವಜ್ರ-ವೈಡೂರ್ಯ ಅಲಂಕಾರದಲ್ಲಿ ಕಂಗೊಳಿಸಿದ ದೇವಿ

Public TV
1 Min Read

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ತಾಯಿ ಚಾಮುಂಡಿಯ ಮುಡಿ ಉತ್ಸವ ಶುಕ್ರವಾರ ರಾತ್ರಿ ನೇರವೇರಿತು.

ಮುಡಿ ಉತ್ಸವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಮೈಸೂರು ಮಹಾರಾಜರು ಉಡುಗೊರೆಯಾಗಿ ಕೊಟ್ಟಿರುವ ವಜ್ರ ವೈಡೂರ್ಯ ಸೇರಿದಂತೆ ಎಲ್ಲಾ ಆಭರಣಗಳನ್ನ ತಾಯಿಗೆ ಹಾಕಿ ಮುಡಿ ಉತ್ಸವ ಮಾಡಲಾಯಿತು.

ವಜ್ರಾಭರಣಗಳಿಂದ ಚಾಮುಂಡಿ ತಾಯಿ ಉತ್ಸವ ಮೂರ್ತಿ ಕಂಗೊಳಿಸಿತು. ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಣೆ ಹಾಕಿಸಿ ನಂತರ ಮಹಾಮಂಗಳಾರತಿ ಮಾಡಿ ಮುಡಿ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಮುಡಿ ಉತ್ಸವ ದಿನದಂದು ವರ್ಷಕ್ಕೆ ಒಂದು ಬಾರಿ ಮಾತ್ರ ಎಲ್ಲಾ ಆಭರಣಗಳನ್ನ ಚಾಮುಂಡಿ ತಾಯಿಗೆ ಧರಿಸಿ ವಿಶೇಷ ಪೂಜೆ ಮಾಡಲಾಗುತ್ತದೆ.

Share This Article