ಹುಬ್ಬಳ್ಳಿಯ ದಲಿತರ ಮನೆಯಲ್ಲಿ ಅಡುಗೆಭಟ್ಟರ ಪಾಕ – ಮತ್ತೊಮ್ಮೆ ಬಿಜೆಪಿ ನಾಯಕರ ಬಣ್ಣ ಬಯಲು

Public TV
1 Min Read

ಹುಬ್ಬಳ್ಳಿ: ನಮಗೆ ಜಾತಿ-ಭೇದವಿಲ್ಲವೆಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ನಾಯಕರ ಬಣ್ಣ ಮತ್ತೊಮ್ಮೆ ಬಯಲಾಗಿದೆ. ದಲಿತರ ಮನೆಯಲ್ಲಿ ಉಪಹಾರ ಸೇವನೆಯ ಬಿಜೆಪಿ ನಾಯಕರ ತೋರಿಕೆ ಪ್ರದರ್ಶನವನ್ನ ಪಬ್ಲಿಕ್ ಟಿವಿ ಬಟಾಬಯಲು ಮಾಡಿದೆ.

ಗುರುವಾರದಂದು ಹುಬ್ಬಳ್ಳಿಯಲ್ಲಿ ಜನಸಂಪರ್ಕ ಸಭೆ ಅಂಗವಾಗಿ ಬಿಜೆಪಿ ನಾಯಕರು ಅಗಮಿಸಿದ್ದರು. ಈ ವೇಳೆ ಬೆಳ್ಳಿಗ್ಗೆ ಹುಬ್ಬಳ್ಳಿಯ ಬಸವೇಶ್ವರ ನಗರದ ದಲಿತ ರೇಣುಕಪ್ಪ ಕೇಲೂರು ಅವರ ನಿವಾಸದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಉಪಹಾರ ಸೇವಿಸಿ ಸಮಾನತೆಯ ಮಂತ್ರ ಜಪಿಸಿದ್ದರು.

ಆದ್ರೆ, ಆ ಉಪಹಾರ ಸಿದ್ದಪಡಿಸಿದ್ದು ರೇಣುಕಪ್ಪ ಮನೆಯಲ್ಲಿ ಅಲ್ಲ, ಲಿಂಗಾತಯತ ಗೌಡರ ಸಮುದಾಯಕ್ಕೆ ಸೇರಿದ್ದ ಈರಣ್ಣ ಸಂಗನಗೌಡ ಎಂಬ ಅಡುಗೆ ಭಟ್ಟರು ಎನ್ನುವುದು ಬಹಿರಂಗವಾಗಿದೆ.

ಮೇ 20ರಂದು ಬಿಜೆಪಿಯ ಹಲವು ನಾಯಕರು ತುಮಕೂರಿನ ಮರಳೂರು ದಿಣ್ಣೆಯ ನಿವಾಸಿಯಾದ ಬಿಜೆಪಿ ದಲಿತ ಕಾರ್ಯಕರ್ತ ಮಧು ಎನ್ನುವವರ ಮನೆಯಲ್ಲಿ ತಟ್ಟೆ ಇಡ್ಲಿ, ಚಿತ್ರಾನ್ನ ಮತ್ತು ಕೇಸರಿ ಬಾತ್ ಸೇವಿಸಿದ್ರು. ಹೋಟೆಲಿನಿಂದ ತಿಂಡಿಯನ್ನು ತಂದು ದಲಿತರ ಮನೆಯಲ್ಲಿ ಸೇವಿಸಿ, ದಲಿತರೆಂದರೆ ನಮಗೆ ಬೇಧವಿಲ್ಲ ಅಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.

ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು. ಯಡಿಯೂರಪ್ಪ ಅವರಿಗೆ ನಮ್ಮ ಹೋಟೆಲ್ ಟೀ ಅಂದ್ರೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಟೀ ಕುಡಿದು ಹೋಗ್ತಾರೆ. ನಿನ್ನೆಯೂ ನಮ್ಮ ಹೋಟೆಲ್ ನಿಂದ 500 ಇಡ್ಲಿ, 500 ವಡೆ, ಚಿತ್ರಾನ್ನವನ್ನು ಕಳುಹಿಸಿದ್ದೇವೆ ಎಂದು ಹೋಟೆಲ್ ಮಾಲೀಕ ಶಿವಕುಮಾರ ಪಬ್ಲಿಕ್ ಟಿವಿಗೆ ತಿಳಿಸಿದ್ದರು.

ಇದನ್ನೂ ಓದಿ: ಹೋಟೆಲ್ಲಿಂದ ತಂದ್ರೂ ಊಟ ಮಾಡಿದ್ದು ದಲಿತರ ಮನೆಯಲ್ಲಿ ಅಲ್ಲವೇ: ಡಿವಿಎಸ್

Share This Article
Leave a Comment

Leave a Reply

Your email address will not be published. Required fields are marked *