ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

Public TV
1 Min Read

ನಾವು (BJP) ಅಧಿಕಾರಕ್ಕೆ ಬಂದ್ರೆ ಜಿಬಿಎ (Greater Bengaluru Authority) ತೆಗೆದು, ಒಂದೇ ಕಾರ್ಪೋರೇಷನ್ ಮಾಡ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಕಟ್ಟಿದ ನಾಡನ್ನ ಒಂದೇ ಮಾಡ್ತೀವಿ. ಜಿಬಿಎ ನಾವು ರದ್ದು ಮಾಡ್ತೀವಿ. ಅಧಿಕಾರ ವಿಕೇಂದ್ರೀಕರಣ ಅಂದರೆ 5 ಪಾಲಿಕೆ ಮಾಡಿದ ಹಾಗೇ ರಾಜ್ಯವನ್ನು ಭಾಗ ಮಾಡ್ತೀರಾ? 5 ಸಿಎಂ ಆಗೋಕೆ ಒಪ್ಪುತ್ತೀರಾ? ಬೆಂಗಳೂರು ಗೆಲ್ಲೋಕೆ ಆಗೊಲ್ಲ ಅಂತ ಕಾಂಗ್ರೆಸ್‍ಗೆ ಗೊತ್ತು. ಅದಕ್ಕೆ ಜಿಬಿಎ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

ಕೆಲವು ಶಾಸಕರು ಅನುಮತಿ ಪಡೆದು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಜಿಬಿಎ ಮೊದಲ ಸಭೆ ಇವತ್ತು ಸರ್ಕಾರ ಮಾಡ್ತಿದೆ. ಸರ್ಕಾರ ಅಂತ ಹೇಳಬೇಕಾ ಅಂತ ಅನುಮಾನ ಬಂದಿದೆ. ಸರ್ಕಾರ ಅಂದರೆ ಕಾನೂನು, ಸಂವಿಧಾನ ಎಲ್ಲ ಇರಬೇಕು. ನಿನ್ನೆ ಸಭೆ ಇದೆ ಅಂತ ಫೋನ್ ಮಾಡಿದ್ರು. ಇವತ್ತು ಬೆಳಗ್ಗೆ 12 ಗಂಟೆಗೆ ಅಜೆಂಡಾ ಕೊಟ್ಟರು. ಸಂಜೆ 4 ಗಂಟೆಗೆ ಮೀಟಿಂಗ್ ಅಂತ ಹೇಳಿದ್ದಾರೆ. ಸಭೆ ಮಾಡಬೇಕಾದ್ರೆ 7 ದಿನ ಮುಂಚೆ ನೊಟೀಸ್ ಕೊಡಬೇಕು ಎಂದಿದ್ದಾರೆ.

ಅಧಿವೇಶನದಲ್ಲಿ ಬಿಲ್ ಕೊಡಬೇಕಾದ್ರೆ ಮೊದಲು ಕೊಡ್ತಾರೆ. ಜಿಬಿಎ ಅಜೆಂಡಾ ಓದೋಕೆ ಆಗೊಲ್ಲ. 12 ಗಂಟೆಗೆ ಅಜೆಂಡಾ ಕೊಟ್ಟಿದ್ದಾರೆ. ಹೇಗೆ ನಾವು ಓದೋದು? ನೋಟಿಸ್ ಕೊಟ್ಟಿರೋದು ನಮಗೆ ಗೊತ್ತಿಲ್ಲ. ಇವರ ಯೋಗ್ಯತೆ ಏನು ಅಂತ ಗೊತ್ತಾಗ್ತಿದೆ. ಇವರಿಗೆ ಜವಾಬ್ದಾರಿ ಇದೆಯಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

Share This Article