`ಕಾಂತಾರ’ ಮೆಚ್ಚಿದ ಅಟ್ಲಿ – ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನೆದ ಖ್ಯಾತ ನಿರ್ದೇಶಕ

Public TV
2 Min Read

`ಪಿಕಲ್ಬಾಲ್ ಲೀಗ್ ಬೆಂಗಳೂರು ಒಪನ್ 2025’ನಲ್ಲಿ ಅಟ್ಲಿ (Filmmaker Atlee) ಮಾಲಿಕತ್ವದ ಬೆಂಗಳೂರು ಜವಾನ್ಸ್ ತಂಡ ಆಡುತ್ತಿದೆ. ಈ ಕಾರ್ಯಕ್ರಮವನ್ನ ಇಂದು ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ ಬಾರಿ ಭಾರತದ ಮೊಟ್ಟ ಮೊದಲ ಪಿಕಲ್ ಬಾಲ್ ಲೀಗ್ ಅನ್ನು (World Pickleball League) ಕರ್ನಾಟಕ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಸಾರಥ್ಯದಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು. ಇದೀಗ ಎರಡನೇ ಪಿಕಲ್ ಬಾಲ್ ಲೀಗ್ ಆವೃತ್ತಿಗೆ ಚಾಲನೆ ನೀಡಲಾಗಿದೆ. ಅದ್ರಂತೆ ಅಕ್ಟೋಬರ್ 10ರಿಂದ 12ರ ವರೆಗೆ ರೋಚಕ ಪಂದ್ಯಾವಳಿ ನಡೆಯಲಿವೆ.

ಈ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ ತಮಿಳು ಸಿನಿಮಾರಂಗದ (Tamil Cinema) ಹೆಸರಾಂತ ನಿರ್ದೇಶಕ ಜವಾನ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಅಟ್ಲಿ ಕುಮಾರ್ ಬೆಂಗಳೂರು ಜವಾನ್ಸ್ ಹೆಸರಿನ ತಂಡವನ್ನು ಖರೀದಿ ಮಾಡಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು. ಬೆಂಗಳೂರು ಜವಾನ್ಸ್ ಕೂಡ ಪಿಕಲ್‌ಬಾಲ್‌ನಲ್ಲಿ ಚಾಂಪಿಯನ್ಸ್ ಆಗಿತ್ತು.

ಬೆಂಗಳೂರು ಓಪನ್‌ 2025 ವರ್ಲ್ಡ್ ಪಿಕಲ್ ಬಾಲ್ ಲೀಗ ಉದ್ಘಾಟಿಸಿ, ಸ್ಫರ್ಧಾಳುಗಳ ಜತೆ ಸ್ನೇಹಪೂರ್ವಕ ಮ್ಯಾಚ್ ಆಡಿದ ಅಟ್ಲಿ ಕುಮಾರ್, ನಾನು ಆರ್‌ಸಿಬಿ ಫ್ಯಾನ್‌, ಕಳೆದ ಬಾರಿ ಐಪಿಎಲ್‌ ಚಾಂಪಿಯನ್‌ ಆದಂತೆ ನಮ್ಮ ತಂಡ ಬೆಂಗಳೂರು ಜವಾನ್ಸ್ ತಂಡ ಕೂಡ ಗೆದ್ದಿತ್ತು. ಬೆಂಗಳೂರು ಸಿಟಿ ಅಂದ್ರೆ ನಂಗೆ ತುಂಬಾ ಇಷ್ಟ. ಇಲ್ಲಿನ ಸಿನಿಮಾ ನಟರಾದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜೊತೆಗೆ ನನಗೆ ಉತ್ತಮ ಸ್ನೇಹವಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡ್ತಾ ಇದ್ದಾರೆ.

ಕಾಂತಾರ ಚಾಪ್ಟರ್‌-01ರ ಬಗ್ಗೆ ಮಾತನಾಡಿದ ಅಟ್ಲಿ ʻಕಾಂತಾರ ನಿಜಕ್ಕೂ ಅದ್ಭುತ ಸಿನಿಮಾʼನಾನು ನೋಡಿ ಬೆರಗಾಗಿದ್ದೇನೆ ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ಮೂಲತಃ ತಮಿಳು ನಾಡಿನವರಾಗಿದ್ದರು ಅಟ್ಲಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಂದ್ರೆ ಸಖತ್ ಭಕ್ತಿ ಅಂತೆ. ಆಗಾಗ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆಯುತ್ತೀನಿ ಎಂದರು. ʻಜವಾನ್ʼ ಸಿನಿಮಾ ಸೂಪರ್ ಹಿಟ್ ಆದ ಕಾರಣ ನಾನು ಖರೀದಿ ಮಾಡಿರುವ ಪಿಕಲ್ ಬಾಲ್ ತಂಡಕ್ಕೆ ಬೆಂಗಳೂರು ಜವಾನ್ಸ್ ಎಂದು ಹೆಸರಿಟ್ಟಿರುವೆ ಎಂದಿದ್ದಾರೆ.

Share This Article