ಹೈದರಾಬಾದ್: ಕಾಲೇಜು ವಾಲಿಬಾಲ್ ತರಬೇತುದಾರನ ಕಿರುಕುಳದಿಂದ ಬೇಸತ್ತು 19 ವರ್ಷದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಹೈದರಾಬಾದ್‌ನ ತರ್ನಾಕ ಪ್ರದೇಶದ ರೈಲ್ವೆ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ವಾಲಿಬಾಲ್ ತರಬೇತುದಾರ ಅಂಬಾಜಿ ನಾಯಕ್ ಆಕೆಗೆ ಕಿರುಕುಳ ನೀಡುತ್ತಿದ್ದ. ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಡ ಹೇರುತ್ತಿದ್ದ ಎಂದು ಆಕೆಯ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯಾವುದೇ ಡೆತ್‌ನೋಟ್ ಪತ್ರ ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮಗೆ ಯಾವುದೇ ಡೆತ್‌ನೋಟ್ ಪತ್ರ ಅಥವಾ ವೀಡಿಯೊ ಪತ್ತೆಯಾಗಿಲ್ಲ. ಸಂತ್ರಸ್ತೆ ತನ್ನ ಕುಟುಂಬಕ್ಕೆ ಯಾವುದೇ ಕಿರುಕುಳದ ಬಗ್ಗೆ ತಿಳಿಸಿರಲಿಲ್ಲ. ಆದರೆ, ಆಕೆಯ ಸ್ನೇಹಿತರು ಅದನ್ನು ಉಲ್ಲೇಖಿಸಿದ್ದಾರೆ. ಈ ವಿಷಯದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಲಾಲಾಗುಡದ ಸ್ಟೇಷನ್ ಹೌಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವು ಕೇಸ್ – CBI ತನಿಖೆಗೆ ನೀಡಲು ಸುಪ್ರೀಂ ನಕಾರ