ವಿಜಯಪುರ | SBI ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಗಳು ಅರೆಸ್ಟ್‌

Public TV
2 Min Read

ವಿಜಯಪುರ: ಜಿಲ್ಲೆಯ ಚಡಚಣ ಶಾಖೆಯ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದ (Bank Robbery Case) ಆರೋಪಿಗಳನ್ನ ಬಂಧಿಸುವಲ್ಲಿ ವಿಜಯಪುರ ಪೋಲಿಸರು ಯಶಸ್ವಿಯಾಗಿದ್ದರೆ.

ಒಟ್ಟು ನಾಲ್ವರು ಆರೋಪಿಗಳನ್ನ ಪೊಲೀಸರು (Chadchan Police) ಬಂಧಿಸಿದ್ದಾರೆ. ಬಿಹಾರ ರಾಜ್ಯದ ರಾಕೇಶ ಕುಮಾರ್‌ ಸಹಾನಿ, ರಾಜಕುಮಾರ ಪಾಸ್ವಾನ, ರಕ್ಷಕ ಕುಮಾರ್ ಮಾತೋ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿರೆಲ್ಲರೂ 21, 22 ವಯಸ್ಸಿನ ಯುವಕರು. ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 3 ತಿಂಗಳು ರಜೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್‌; ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲು

Robbery of Rs 8 crore cash 50 kg gold jewellery at gunpoint to SBI staff chadchana Vijayapur

ಈಗ ಬಂಧಿಸ‌ಲಾ ಮೂವರು ಆರೋಪಿಗಳು ಅಕ್ರಮವಾಗಿ ಪಿಸ್ತೂಲ್ ಪೂರೈಕೆ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದರು. ಮತ್ತೋರ್ವ ಆರೋಪಿ ಮಹಾರಾಷ್ಟ್ರ ರಾಜ್ಯದ ಪ್ರಮುಖ ಆರೋಪಿಯಾಗಿದ್ದು, ಅ.7ರಂದೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿತ್ತು. ಆದ್ರೆ ಆತನ ಹೆಸರನ್ನ ಬಹಿರಂಗಪಡಿಸಿಲ್ಲ.

ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಈವರೆಗೆ 9.1 ಕೆಜಿ ಚಿನ್ನ, 86,31,220 ರೂ. ನಗದು ಜಪ್ತಿ ಮಾಡಲಾಗಿದೆ. ಚಡಚಣ ಬ್ಯಾಂಕ್ ದರೋಡೆಯಲ್ಲಿ ಒಟ್ಟು ನಾಲ್ವರ ಬಂಧನವಾಗಿದ್ದು, ತನಿಖೆ ಮುಂದುವರೆದಿದೆ ಅಂತಾ ಎಡಿಜಿಪಿ ಆರ್ ಹಿತೇಂದ್ರ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ 

vijayapura SBI bank robbery

ಏನಿದು ಕೇಸ್‌?
ಜಿಲ್ಲೆಯ ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ 1 ಕೋಟಿ ರೂ. ನಗದು, 12 ರಿಂದ 13 ಕೆ.ಜಿ ಚಿನ್ನ ದರೋಡೆಯಾಗಿದೆ. ಸಾಲಕ್ಕಾಗಿ ಅಡವಿಟ್ಟಿದ್ದ 12-13 ಕೆಜಿ ಚಿನ್ನ ದರೋಡೆಯಾಗಿರುವುದಾಗಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಾಥಮಿಕ ಮಾಹಿತಿ ನೀಡಿದ್ದರು.

ಐದಕ್ಕೂ ಹೆಚ್ಚು ಮಂದಿ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿತ್ತು. ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿ ದರೋಡೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಬ್ಯಾಂಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದರು. ಇದನ್ನೂ ಓದಿ: ಉ.ಕರ್ನಾಟಕದಲ್ಲಿ ಪ್ರವಾಹ – ಕೇಂದ್ರದಿಂದ ನೆರೆಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡುವಂತೆ ಮೋದಿಗೆ ಯತ್ನಾಳ್ ಪತ್ರ

Share This Article