ಸದ್ಯ ಜೈಲಲ್ಲಿರುವ ದರ್ಶನ್ಗೆ (Darshan) ಹಾಸಿಗೆ ದಿಂಬು ಪಡೆದುಕೊಳ್ಳುವುದೇ ದೊಡ್ಡ ಸಾಹಸ ಆಗಿರುವಾಗ ರೊಮ್ಯಾನ್ಸ್ ಎಲ್ಲಿಂದ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳೋದ್ರಲ್ಲಿ ಸಂದೇಹವಿಲ್ಲ. ಹೌದು ಜೈಲಲ್ಲಿರುವ ದರ್ಶನ್ ನರಕ ಅನುಭವಿಸುತ್ತಿದ್ದರೆ ಇಲ್ಲಿ ಅವರ ಅಭಿನಯದ `ಡೆವಿಲ್’ ಚಿತ್ರದ (Devil Cinema) ರೊಮ್ಯಾಂಟಿಕ್ ಹಾಡು ರಿಲೀಸ್ ಆಗೋದಕ್ಕೆ ಕೌಂಟ್ಡೌನ್ ಶುರುವಾಗಿದೆ. ಥೈಲ್ಯಾಂಡ್ನಲ್ಲಿ ಚಿತ್ರೀಕರಣವಾದ ಹಾಡಿಗೆ ನಟಿ ರಚನಾ ರೈ ಜೊತೆ ದರ್ಶನ್ ರೊಮ್ಯಾನ್ಸ್ ಮಾಡಿದ್ದಾರೆ. ಹಾಡಿನ ಪ್ರೋಮೋ ರಿಲೀಸ್ ಆಗಿದ್ದು ಅತಿವೇಗದಲ್ಲಿ ಭಾರಿ ಮೆಚ್ಚುಗೆ ಪಡೆದುಕೊಳ್ತಿದೆ.
ಅಕ್ಟೋಬರ್ 10ರ ಶುಕ್ರವಾರ ಸಂಜೆ 6 ಗಂಟೆಗೆ ರಿಲೀಸ್ ಆಗಲಿರುವ ಹಾಡಿಗಾಗಿ ದರ್ಶನ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದು ಡೆವಿಲ್ ಚಿತ್ರದ ಎರಡನೇ ಹಾಡಾಗಿದ್ದು ಹಿಂದೆ ರಿಲೀಸ್ ಆಗಿದ್ದ `ಇದ್ರೆ ನೆಮ್ದಿಯಾಗಿರ್ಬೇಕ್’ ಹಾಡಿಗೆ ಕಾಂಟ್ರ್ಯಾಸ್ಟ್ ಆಗಿರಲಿದೆ ಈ ಹಾಡು. `ಒಂದೇ ಒಂದು ಸಲ ಸೋತು ಬಿಡು ನೀನು..ಒಂದೇ ಒಂದು ಮಾತೂ ಆಡದೆ’, ಎನ್ನುವ ಸಾಲಿನಿಂದ ಶುರುವಾಗುವ ಹಾಡಿನ ಹೆಚ್ಚಿನ ಮಾಹಿತಿ ರಿಲೀಸ್ ಆದ ಬಳಿಕವೇ ತಿಳಿಯಬೇಕಿದೆ.
ರಿಲೀಸ್ ಆಗಿರುವ ಹಾಡಿನ ಪ್ರೋಮೋದಲ್ಲಿ ರಚನಾ ರೈ ಬೀಚ್ವೇರ್ ಧರಿಸಿ ದರ್ಶನ್ ಜೊತೆ ಬಿಂದಾಸ್ ಸ್ಟೆಪ್ ಹಾಕಿದ್ದಾರೆ.