ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು

0 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಕೆಳಾಸೆಯಲ್ಲಿ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತೆರಳಿದ್ದ ಯುವಕನೋರ್ವ ನೀರುಪಾಲಾಗಿದ್ದಾನೆ.

ಯಲ್ಲಾಪುರದ ಸಬಗೇರಿ ನಿವಾಸಿ ಸಾಗರ್ ದೇವಾಡಿಗ ನೀರುಪಾಲಾದ ಯುವಕ. ನಿನ್ನೆ ಮಧ್ಯಾಹ್ನದ ವೇಳೆಗೆ, ಸಾಗರ್ ತನ್ನ ಮೂರ್ನಾಲ್ಕು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸೆಲಬ್ರೇಷನ್‌ಗಾಗಿ ಬೇಡ್ತಿ ಹಳ್ಳದ ಸಮೀಪವಿರುವ ಕೆಳಾಸೆ ಹೊಳೆಗೆ ಹೋಗಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ತೇಲಿ ಹೋಗಿರುವುದಾಗಿ ತಿಳಿದು ಬಂದಿದೆ.

ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಸ್ಥಳಕ್ಕಾಗಮಿಸಿ ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article