ಧರ್ಮಸ್ಥಳ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ

Public TV
1 Min Read

ಮಂಗಳೂರು: ಧರ್ಮಸ್ಥಳ (Dharmasthala Case) ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ಹಂತಕ್ಕೆ‌ ತಲುಪಿದ್ದು, ಅಂತಿಮ ವರದಿ ಸಲ್ಲಿಸಲು ಬೇಕಾದ ತಯಾರಿಯನ್ನ ಎಸ್ಐಟಿ (SIT) ಅಧಿಕಾರಿಗಳು ಮಾಡುತ್ತಿದ್ದಾರೆ.

ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬುಧವಾರ ದಿಢೀರ್ ಭೇಟಿ ನೀಡಿದ್ದಾರೆ.‌ SIT ಪೊಲೀಸ್ ಠಾಣೆಗೆ ಆಗಮಿಸಿದ ಮೊಹಾಂತಿ, ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮಾ ಸೇರಿದಂತೆ ಇತರೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಕರಣದ ಇಂದಿನವರೆಗಿನ ಪ್ರಗತಿ ವರದಿ ಬಗ್ಗೆ ಪರಿಶೀಲನೆ ನಡೆದಿದೆ. ಮುಂದಿನ ಕಾರ್ಯಾಚರಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಮಂಜುನಾಥ ಸ್ವಾಮಿ, ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮೆ ಕೇಳ್ತೀನಿ – ನನ್ನಿಂದ ತಪ್ಪಾಗಿದೆ ಎಂದ ಸುಜಾತ ಭಟ್‌

ಅಧಿಕಾರಿಗಳು ಈಗಾಗಲೇ ಒಂದು ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಮೊಹಾಂತಿ ಪರಿಶೀಲನೆ ಮಾಡಿದ್ದಾರೆ. SIT ಮುಖ್ಯಸ್ಥ ಮೊಹಾಂತಿ ಎರಡು ದಿನಗಳ ಕಾಲ ಮಂಗಳೂರಿನಲ್ಲೇ ಇರುವ ಸಾಧ್ಯತೆಯಿದ್ದು, ತನಿಖೆಯನ್ನು ಸ್ವತಃ ಮೇಲ್ವಿಚಾರಣೆ ಮಾಡಲಿದ್ದಾರೆ. ಸದ್ಯ ಎಲ್ಲರ ಕಣ್ಣು ಎಸ್ಐಟಿ ಅಧಿಕಾರಿಗಳು ಸಿದ್ಧಪಡಿಸುತ್ತಿರುವ ವರದಿಯ ಮೇಲಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಶೀಘ್ರವೇ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಗೃಹ ಸಚಿವ ಜಿ.ಪರಮೇಶ್ವರ್‌ ಸೂಚನೆ ನೀಡಿದ್ದರು. ಬಂದವರೆಲ್ಲ ದೂರು ಕೊಡೋದು, ಅರ್ಜಿ ಕೊಡೋದು ಆಗ್ತಿದೆ. ಅಲ್ಲದೇ, ಹೇಳಿಕೆಗಳನ್ನು ಕೊಡಲಾಗುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಹೇಳಿದ್ದೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಅನನ್ಯಾ ಭಟ್ ಕೇಸ್ – ಖ್ಯಾತ ಬಹುಭಾಷಾ ನಟನ ಸಹೋದರನಿಗೆ SIT ನೋಟಿಸ್ ಸಾಧ್ಯತೆ

Share This Article