– ನಿಷೇಧಿತ ಟಿಟಿಪಿ & ಪಾಕ್ ಭದ್ರತಾ ಪಡೆಗಳ ನಡುವೆ ಸಂಘರ್ಷ
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಉಗ್ರರು ಮತ್ತು ಪಾಕಿಸ್ತಾನ ಭದ್ರತಾ ಪಡೆಗಳ ನಡುಗೆ ಘರ್ಷಣೆ ಏರ್ಪಟ್ಟಿದೆ. ಘಟನೆಯಲ್ಲಿ 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಮೃತಪಟ್ಟಿದ್ದಾರೆ.
ಅ.7-8 ರ ರಾತ್ರಿ ಫಿಟ್ನಾ ಅಲ್-ಖವಾರಿಜ್ ಎಂದು ಕರೆಯಲ್ಪಡುವ ಗುಂಪಿನ ಭಯೋತ್ಪಾದಕರಿರುವ ಮಾಹಿತಿ ಮೇರೆಗೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಒರಾಕ್ಜೈ ಜಿಲ್ಲೆಯಲ್ಲಿ ಪಾಕ್ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ ಬಳಿಕ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಮೆರಿಕಕ್ಕೆ ಅಪರೂಪದ ಖನಿಜಗಳ ಮೊದಲ ರಫ್ತು ಕಳುಹಿಸಿದ್ದೇವೆ : ಪಾಕ್
ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಭೀಕರ ಗುಂಡಿನ ಚಕಮಕಿಯಲ್ಲಿ, 19 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದಂತೆ 11 ಪಾಕಿಸ್ತಾನಿ ಸೈನಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ.
ನಿಷೇಧಿತ ಟಿಟಿಪಿ 2022 ರ ನವೆಂಬರ್ನಲ್ಲಿ ಸರ್ಕಾರದೊಂದಿಗೆ ಕದನ ವಿರಾಮ ಕೊನೆಗೊಳಿಸಿದ ನಂತರ, ಪಾಕಿಸ್ತಾನವು ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದಲ್ಲಿ ಉಗ್ರಗಾಮಿ ದಾಳಿಗಳಲ್ಲಿ ಹೆಚ್ಚಳವಾಗಿತ್ತು. ಈ ಗುಂಪು ಭದ್ರತಾ ಪಡೆಗಳು, ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದನ್ನೂ ಓದಿ: S-400ಗೆ ಟಕ್ಕರ್ ಕೊಡಲು ತನ್ನದೇ ಮಿಸೈಲ್ ಅಭಿವೃದ್ಧಿಪಡಿಸಿದ ಪಾಕ್ – ಇದು ಬ್ರಹ್ಮೋಸ್ಗಿಂತ ಶಕ್ತಿಶಾಲಿಯೇ?