– ಆಗಿರುವ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೊಡಬೇಕು
ಬೆಂಗಳೂರು: ನಟ್ಟು ಬೋಲ್ಟು ವಿಚಾರಕ್ಕೂ ಬಿಗ್‌ಬಾಸ್ ಬಂದ್‌ಗೂ ಯಾವುದೇ ಸಂಬಂಧ ಇಲ್ಲ. ಇದರಲ್ಲಿ ಉಪಮುಖ್ಯಮಂತ್ರಿಗಳ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಡಿಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿ ಕೊಟ್ಟ ನೋಟಿಸ್‌ಗೂ ಬಿಗ್‌ಬಾಸ್ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧ ಇಲ್ಲ. ಜಾಲಿವುಡ್ ಮಾಲೀಕರು ಸಿಎಫ್‌ಪಿಸಿಎಫ್‌ಓ ತೆಗೆದುಕೊಂಡಿಲ್ಲ ಅದಕ್ಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಲ್ಲಿ ಬೇರೆ ಏನೂ ಇಲ್ಲ. ಈಗ ಅವರು ಹೈಕೋರ್ಟ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ನಟ್ಟು ಬೋಲ್ಟು ವಿಚಾರವಾಗಿ ಇದಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಉಪಮುಖ್ಯಮಂತ್ರಿಗಳ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬಿಗ್‌ಬಾಸ್‌ಗೆ ಇಂದೇ ಬಿಗ್ ರಿಲೀಫ್? – ಮತ್ತೆ ಶೋ ಆರಂಭ ಸಾಧ್ಯತೆ
ಹಲವು ಬಾರಿ ನೋಟಿಸ್ ಕೊಟ್ಟರೂ ಅವರು ಕ್ಯಾರೆ ಎನ್ನಲಿಲ್ಲ. ಹೀಗಾಗಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ. ಟಿವಿ ನೋಡಿ ನನಗೆ ವಿಚಾರ ಗೊತ್ತಾಯ್ತು. ಮಾಲಿನ್ಯ ಇಲಾಖೆಯವರು ಬಂದ್ ಮಾಡಿದ್ದಾರೆ. ಮನರಂಜನೆ ಇರಬೇಕು, ಏನೋ ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ ಎಂದು ನಾನೇ ಡಿಸಿ, ಎಸ್‌ಪಿಗೆ ಕಾಲ್‌ಮಾಡಿ ಹೇಳಿದ್ದೇನೆ. ಪೊಲ್ಯುಷನ್ ಬೋರ್ಡ್ ಜೊತೆಗೂ ಮಾತಾಡಿದ್ದೇನೆ. ಬಿಗ್‌ಬಾಸ್‌ಗೆ ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಅವಕಾಶ ಕೊಡಿ ಎಂದು ಹೇಳಿದ್ದೇನೆ. ಸದ್ಯ ಅವರು ಹೈಕೋರ್ಟ್‌ಗೆ ಹೋಗಿದ್ದಾರೆ. ಅಲ್ಲಿ ತೀರ್ಪು ಬಂದ ಮೇಲೆ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.