ಬಿಗ್‌ ಬಾಸ್‌ ಮನೆಗೆ ಬೀಗ – ರಕ್ಷಿತಾ ಡೈಲಾಗ್‌ ವೈರಲ್‌

Public TV
1 Min Read

ಬಿಗ್‌ ಬಾಸ್‌ (Bigg Boss) ಮನೆಗೆ ಬೀಗ ಬಿದ್ದ ಬೆನ್ನಲ್ಲೇ ಕಿರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ(Rakshita Shetty) ಅವರ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿಗ್‌ ಬಾಸ್‌ ಮನೆ ಪ್ರವೇಶಿಸಿದ ಕೂಡಲೇ ರಕ್ಷಿತಾ ಅವರನ್ನು ಇತರ ಸ್ಪರ್ಧಿಗಳು ಎಲಿಮಿನೇಟ್‌ ಮಾಡಿದ್ದರು. ಎಲಿಮಿನೇಟ್‌ ಮಾಡಿದ್ದರೂ ರಕ್ಷಿತಾ ಅವರು ಸೀಕ್ರೆಟ್‌ ರೂಮಿನಲ್ಲಿದ್ದರು. ಇದನ್ನೂ ಓದಿ:  ಬಿಗ್‌ಬಾಸ್‌ ಸ್ಪರ್ಧಿಗಳು ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್‌

ಶನಿವಾರ ಸುದೀಪ್‌ (Sudeep) ಅವರು ರಕ್ಷಿತಾ ಅವರನ್ನು ಮತ್ತೆ ಮನೆಯ ಒಳಗಡೆ ಕಳುಹಿಸಿದ್ದರು. ಕಳುಹಿಸುವ ಮೊದಲು ಮನೆಗೆ ಹೋದ ಮೇಲೆ ಯಾರನ್ನು ಎಲಿಮಿನೇಟ್‌ ಮಾಡುತ್ತೀರಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಎಲ್ಲರನ್ನೂ ಎಲಿಮಿನೇಟ್‌ ಮಾಡುತ್ತೇನೆ ಎಂದು ರಕ್ಷಿತಾ ಉತ್ತರಿಸಿದ್ದರು. ರಕ್ಷಿತಾ ಎರಡನೇ ಬಾರಿ ಮನೆ ಪ್ರವೇಶಿಸಿದ ಮೂರನೇ ದಿನಕ್ಕೆ ಎಲ್ಲರೂ ಎಲಿಮಿನೇಟ್‌ ಆಗಿದ್ದಾರೆ.

ರಕ್ಷಿತಾ ಅವರ ಈ ವಿಡಿಯೋ ಈಗ ಹರಿದಾಡುತ್ತಿದ್ದು ದೇವರು ಆಕೆಯ ಪ್ರಾರ್ಥನೆಗೆ ತಥಾಸ್ತು ಎಂದಿದ್ದಾನೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

Share This Article