ಬಿಗ್‌ಬಾಸ್ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಹಾಕಿದ ಬಳಿಕ ಸ್ಪರ್ಧಿಗಳನ್ನು ಈಗಲ್‌ಟನ್ ರೆಸಾರ್ಟ್ ಶಿಫ್ಟ್ ಮಾಡಲಾಗಿದೆ.
ಇನ್ನೋವಾ ಕಾರಿನಲ್ಲಿ ಸ್ಪರ್ಧಿಗಳು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಒಂದು ಕಾರಿನಲ್ಲಿ ತಲಾ ಐದು ಮಂದಿ ಪ್ರಯಾಣಿಸಿದರು. ಗೇಟ್ ನಂಬರ್ ಸಿ ಮೂಲಕ ಜಾಲಿವುಡ್ ಸ್ಟುಡಿಯೋದಿಂದ ಆಚೆ ಬಂದ ಬಿಗ್ ಬಾಸ್ ಸ್ಪರ್ಧಿಗಳು ಐದಕ್ಕೂ ಹೆಚ್ಚು ಇನ್ನೋವಾ ಕಾರುಗಳ ಮೂಲಕ ಹೊರಟರು.
15 ಕ್ಕೂ ಹೆಚ್ಚು ರೂಮ್‌ಗಳನ್ನು ಬಿಗ್‌ಬಾಸ್ ಮ್ಯಾನೇಜ್‌ಮೆಂಟ್ ಬುಕ್ ಮಾಡಿದೆ. ಸ್ಪರ್ಧಿಗಳು, ಟೆಕ್ನಿಷಿಯನ್‌ಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.