– ಎಎಸ್‍ಐ ಮನೆಯಲ್ಲಿ ಊಟ ಮಗಿಸಿ ಡ್ಯಾಮ್‌ಗೆ ತೆರಳಿದ್ದ ತಂಡ
ತುಮಕೂರು: ಕುಣಿಗಲ್‌ನಲ್ಲಿರುವ (Kunigal) ಮಾರ್ಕೊನಹಳ್ಳಿ ಡ್ಯಾಂ (Markonahalli Dam) ಹಿನ್ನಿರಿನಲ್ಲಿ 6 ಮಂದಿ ಕೊಚ್ಚಿ ಹೋಗಿದ್ದಾರೆ. ಈ ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
15 ಜನ ಬೈಕ್ ಹಾಗೂ ಓಮಿನಿಯಲ್ಲಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್‍ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಅಲ್ಲಿ ಊಟ ಮುಗಿಸಿ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು. ಇದರಲ್ಲಿ 12 ಜನ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ 6 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದನ್ನೂ ಓದಿ: ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್
ಮೃತರನ್ನು ತುಮಕೂರು ನಗರದ ತಬಸಮ್ (42), ಶಬಾನಾ (44), ಮಿಶ್ರಾ (4), ಮಹಿಬ್ (ಈ ನಾಲ್ವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ), ಶಾಜಿಯಾ (25), ಅರ್ಬಿನ್ (30) (ಈ ಇಬ್ಬರ ಶವಗಳು ಪತ್ತೆಯಾಗಿದೆ) ಎಂದು ಗುರುತಿಸಲಾಗಿದೆ. ಈ ಅವಘಡದಲ್ಲಿ ನವಾಜ್ (22) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ರಜೆ ನಿಮಿತ್ತ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿದ್ದರು.
ಎಎಸ್ ಪಿ ಗೋಪಾಲ್, ಪುರುಷೋತ್ತಮ್, ಕುಣಿಗಲ್ ಡಿವೈಎಸ್ ಪಿ ಓಂ ಪ್ರಕಾಶ್, ಹಾಗೂ ಅಮೃತೂರು ಪಿಎಸ್ಐ ಶಮಂತ್ ಗೌಡ, ಭೇಟಿ ಪರಿಶೀಲನೆ ನಡೆಸಿದ್ದಾರೆ. ಕತ್ತಲೆಯಾದ ಹಿನ್ನೆಲೆ ಶೋಧಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ಬುಧವಾರ (ಅ.7) ಬೆಳಗ್ಗೆ 7 ಗಂಟೆಗೆ ಮತ್ತೆ ಶೋಧಕಾರ್ಯ ಮುಂದುವರಿಯಲಿದೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಇದನ್ನೂ ಓದಿ: ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್ ಕುಮಾರ್ ಅರೆಸ್ಟ್