– ಅರಣ್ಯ ಸಚಿವ ಈಶ್ವರ ಖಂಡ್ರೆ ಸಮರ್ಥನೆ ಏನು?
ರಾಮನಗರ: ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್ಟೈನ್ಮೆಂಟ್ ಪ್ರೈ.ಲಿ. (Jollywood Studios) ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ (Bigg Boss Kannada 12) ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು
ಇಲ್ಲಿ ಎಸ್ಟಿಪಿ ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ. ಜನರೇಟರ್ ಸೆಟ್ಗಳಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ, ಮಂಡಳಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.