– ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ
ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ (Karur Stampede Case) ನಡೆದ ರ್ಯಾಲಿಯಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಟ-ರಾಜಕಾರಣಿ ವಿಜಯ್ ಅವರು ವೀಡಿಯೊ ಕರೆಗಳ ಮೂಲಕ ವೈಯಕ್ತಿಕವಾಗಿ ಮಾತನಾಡಿ ಸಹಾಯ ಮಾಡಲು ಪ್ರಾರಂಭಿಸಿದ್ದಾರೆ.
ವಿಡಿಯೋ ಕರೆ ಮಾಡಿದ ವೇಳೆ ನಾನು ನಿಮ್ಮೊಂದಿಗಿದ್ದೇನೆ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ವಿಜಯ್ ದುಃಖಿತ ಕುಟುಂಬಗಳಿಗೆ ಹೇಳಿದರು. ವೀಡಿಯೊ ಕರೆಯ ಸಮಯದಲ್ಲಿ ರೆಕಾರ್ಡ್ ಮಾಡಬೇಡಿ ಅಥವಾ ಫೋಟೋ ತೆಗೆದುಕೊಳ್ಳಬೇಡಿ ಎಂದು ನಟರ ತಂಡ ಕುಟುಂಬಗಳನ್ನು ವಿನಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್
ಪ್ರತಿಯೊಂದು ಕರೆಯೂ ಸುಮಾರು 20 ನಿಮಿಷಗಳ ಕಾಲ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ವಿಜಯ್ ತೀವ್ರ ಸಂತಾಪ ವ್ಯಕ್ತಪಡಿಸಿ ಸಹಾಯದ ಭರವಸೆ ನೀಡಿದರು. ಮೂಲಗಳು ಹೇಳುವಂತೆ ವಿಜಯ್ ಅವರು ಶೀಘ್ರದಲ್ಲೇ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಲವಾರು ಟಿವಿಕೆ ಕಾರ್ಯಕರ್ತರನ್ನು ಬಂಧಿಸಲಾಗಿದ್ದರೂ, ಯಾವುದೇ ಎಫ್ಐಆರ್ನಲ್ಲಿ ವಿಜಯ್ ಅವರ ಹೆಸರಿಲ್ಲ. ಈ ನಡುವೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆ ಬಿಜೆಪಿ ನಾಯಕಿ ಉಮಾ ಆನಂದನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರೂರ್ ಕಾಲುಳ್ತಿತ ದುರಂತ; 2 ವಾರ ತಮಿಳುನಾಡು ಪ್ರವಾಸ ರದ್ದಗೊಳಿಸಿದ ವಿಜಯ್