ಕಾಂತಾರ ಚಾಪ್ಟರ್-1 ಚಿತ್ರ (Kantara Chapter 1) ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅಕ್ಟೋಬರ್ 2ರಂದು ತೆರೆಕಂಡ ಕಾಂತಾರ ಸಿನಿಮಾ ವಿಶ್ವದಾದ್ಯಂತ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸಿನಿಮಾ ಶೂಟಿಂಗ್ನ 3 ವರ್ಷಗಳಲ್ಲಾದ ಅನುಭವಗಳನ್ನು ಕೆಲವೇ ಸಾಲುಗಳಲ್ಲಿ ಹಂಚಿಕೊಳ್ಳುವುದು ತುಂಬಾನೇ ಕಷ್ಟ. ಈಗಾಗಲೇ ಚಿತ್ರತಂಡ ಸುದ್ದಿಗೋಷ್ಠಿ ವೇಳೆ ಕೆಲವೊಂದು ವಿಚಾರಗಳನ್ನ ಹಂಚಿಕೊಂಡಿದೆ. ಈ ಸಿನಿಮಾದ ಭಾಗವಾಗಿರುವ ಪ್ರಗತಿ ಶೆಟ್ಟಿ ಜಾಲತಾಣದಲ್ಲಿ ತಮ್ಮ ಎಕ್ಸ್ಪೀರಿಯನ್ಸ್ ಶೇರ್ ಮಾಡಿಕೊಂಡಿದ್ದಾರೆ.
ಪ್ರಗತಿ ಶೆಟ್ಟಿ (Pragathi Rishab Shetty) ಕಾಂತಾರ ಸಿನಿಮಾಗೆ ವಸ್ತ್ರವಿನ್ಯಾಸಕಿಯಾಗಿ ಕಾರ್ಯ ನಿಭಾಯಿಸಿದ್ದಾರೆ. ಕಾಂತಾರ ಸಿನಿಮಾದ ಸಕ್ಸಸ್ಗೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕೂಡಾ ಮತ್ತೊಂದು ಕಾರಣವಾಗಿದ್ದಾರೆ. ಕಾಂತಾರ ಶೂಟಿಂಗ್ ದಿನಗಳಲ್ಲಿ ಕೆಲಸ ಮಾಡಿದ ದಿನಗಳನ್ನ ಪ್ರಗತಿ ಶೆಟ್ಟಿ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಭಾಗವಾಗಿರುವ ನೆನಪುಗಳನ್ನ ಯಾವತ್ತೂ ಮರೆಯೋಕೆ ಆಗುವುದಿಲ್ಲ ಅಂತಾ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದೀರಿ: ರಿಷಬ್, ಹೊಂಬಾಳೆಗೆ ಪ್ರಕಾಶ್ ರಾಜ್ ಮೆಚ್ಚುಗೆ
Being a part of Kantara Chapter 1 has been a truly unforgettable journey.
Designing costumes for a story so rooted, raw, and divine was more than work it was an emotion.#KantaraChapter11/2 pic.twitter.com/0gG7tkqfc5
— Pragathi Rishab Shetty (@PragathiRShetty) October 7, 2025
ಪೋಸ್ಟ್ನಲ್ಲಿ, ಕಾಂತಾರ ಚಾಪ್ಟರ್ 1 ಚಿತ್ರದ ಭಾಗವಾಗಿರುವುದು ನಿಜಕ್ಕೂ ಒಂದು ಅಚ್ಚಳಿಯದ ಪಯಣ. ಈ ದೈವಿಕ ಕಥೆಗಾಗಿ ವಸ್ತ್ರವಿನ್ಯಾಸಗೊಳಿಸಿರುವುದು ಕೆಲಸಕ್ಕಿಂತ ಹೆಚ್ಚಾಗಿ ಅದೊಂದು ಭಾವನೆ ಎಂದಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾಗೆ ಕೆಲಸ ಮಾಡುವುದು ತುಂಬಾ ಜವಾಬ್ದಾರಿಯುತವಾದ ಕೆಲಸ. ಆ ಕೆಲಸವನ್ನ ಇಡೀ ತಂಡ ಅಚ್ಚುಕಟ್ಟಾಗಿ ನಿಭಾಯಿಸಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಬೆನ್ನೆಲುಬಾಗಿ ಸಾಥ್ ಕೊಟ್ಟಿದ್ದಾರೆ ಪ್ರಗತಿ ಶೆಟ್ಟಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಸಿನಿಮಾದ ಶೂಟಿಂಗ್ ಸೆಟ್ನ ದಿನಗಳನ್ನ ನೆನೆದಿದ್ದಾರೆ. ಈ ಪೋಸ್ಟ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದೀರಿ: ರಿಷಭ್, ಹೊಂಬಾಳೆಗೆ ಪ್ರಕಾಶ್ ರಾಜ್ ಮೆಚ್ಚುಗೆ