ಬೆಂಗಳೂರು: ನಾನು ತಪ್ಪು ಮಾಡಿದ್ದೇನೆ. ಮಂಜುನಾಥ ಸ್ವಾಮಿ (Manjunatha Swamy)ಬಳಿ ನಾನು ಕ್ಷಮಾಪಣೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆ (Veerendra Heggade) ಅವರನ್ನು ಭೇಟಿಯಾಗಿ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಸುಜಾತ ಭಟ್ (Sujatha Bhat) ಪಬ್ಲಿಕ್ ಟಿವಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬುರುಡೆ ಗ್ಯಾಂಗ್ ಜೊತೆ ಹೋಗಿ ನಾನು ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಿದೆ. ಹಾಗಾಗಿ ನಾನು ಧರ್ಮಸ್ಥಳಕ್ಕೆ ಹೋಗಿ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ಖ್ಯಾತ ನಟನ ಸಹೋದರ ತನಗೆ ಸಹಾಯ ಮಾಡಿದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಟನ ಸಹೋದರನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ವಾಸಂತಿ ಸತ್ತಿಲ್ಲ ಆಕೆ ಬದುಕಿದ್ದಾಳೆ ಎಂದು ಎಂದು ಎಸ್‌ಐಟಿ ಮುಂದೆ ಹೇಳಿದ್ದೇನೆ. ಹೀಗಾಗಿ ಎಸ್‌ಐಟಿ ಅವರು ತನಿಖೆ ನಡೆಸುತ್ತಿರಬಹದು ಎಂದರು. ಇದನ್ನೂ ಓದಿ: ಅನನ್ಯಾ ಭಟ್ ಕೇಸ್ – ಖ್ಯಾತ ಬಹುಭಾಷಾ ನಟನ ಸಹೋದರನಿಗೆ SIT ನೋಟಿಸ್ ಸಾಧ್ಯತೆ
ನನಗೆ ಈಗ ಜೀವನ ನಡೆಸುವುದು ಕಷ್ಟವಾಗಿದೆ. ನನಗೆ ಮೊಬೈಲ್ ಭಾಗ್ಯ, ವಾಚ್ ಭಾಗ್ಯ, ದುಡ್ಡಿನ ಭಾಗ್ಯ ಎಂದು ಹೇಳುತ್ತಾರೆ. ಸಹಾಯ ಮಾಡುವುದೇ ತಪ್ಪು ಅಂತಾದ್ರೆ ಮಾನವೀಯತೆ ಎಲ್ಲಿದೆ? ಅನನ್ಯ ಭಟ್ , ಬುರುಡೆ ಗ್ಯಾಂಗ್ ಎಲ್ಲದಕ್ಕೂ ನಾನು ಫುಲ್ ಸ್ಟಾಪ್ ಇಟ್ಟಿದ್ದೇನೆ ಎಂದು ತಿಳಿಸಿದರು.
ವಸಂತಿ ಪ್ರಕರಣದಲ್ಲಿ ನಟನ ಸಹೋದರ ಇರುವುದು ನಿಜ. ವಾಸಂತಿ ಮಿಸ್ಸಿಂಗ್ ಕೇಸಲ್ಲಿ ನಟನ ಸಹೋದರ ಎ2 ಆರೋಪಿ. ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ವಾಸಂತಿ ಹಾಗೂ ಸ್ಟಾರ್ ನಟನ ಸಹೋದರನ ನಡುವಿನ ಸಂಬಂಧ ಏನು ಅಂತಾ ಗೊತ್ತಿಲ್ಲ ಎಂದು ಹೇಳಿದರು.