ಸದಾ ಗ್ಲ್ಯಾಮರ್ ಫೋಟೋಶೂಟ್ ಮಾಡಿಸಿ ಆಕರ್ಷಕ ಫೋಟೋ ಪೋಸ್ಟ್ ಮಾಡುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಇದೀಗ ಇನ್ಸ್ಟಾಗ್ರಾಂನಲ್ಲಿ ವಡಾಪಾವ್ (Vada Pav) ತಿನ್ನುವ ಫೋಟೋ ಹಾಕಿ ಡಿಫರೆಂಟ್ ಪೋಸ್ ಕೊಟ್ಟಿದ್ದಾರೆ.
ಮುಂಬೈನ ಸ್ಪೆಷಲ್ ವಡಾಪಾವ್ ಜೊತೆಗೆ ಹುರಿದ ಹಸಿಮೆಣಸಿಕಾಯಿ ಜೊತೆ ತಿನ್ನುವ ಮಜವೇ ಬೇರೆ. ಬಾಯಲ್ಲಿ ನಿರೂರುವ ಈ ಖಾದ್ಯವನ್ನ `ಬಡವರ ಬರ್ಗರ್’ ಎಂದೇ ಕರೆಯಲಾಗುತ್ತೆ. ಫಿಟ್ನೆಸ್ ಮಂತ್ರ ಪಾಲಿಸೋ ಶಿಲ್ಪಾ ಶೆಟ್ಟೆ ಅಪ್ಪಿ ತಪ್ಪಿಯೂ ವಡಾಪಾವ್ ತಿನ್ನೋದನ್ನ ಜನರು ಊಹಿಸಲ್ಲ. ಆದರೆ ಇದೀಗ ಶಿಲ್ಪಾಶೆಟ್ಟಿ ಮುಂಬೈನ ಗಲ್ಲಿಯಲ್ಲಿ ಕಾರು ನಿಲ್ಲಿಸಿ ಎರಡು ಪ್ಲೇಟ್ ವಡಾಪಾವ್ ತಿನ್ನುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ
ಮೆಣಸಿಕಾಯಿ ಕಡಿಯುತ್ತಾ ವಡಾಪಾವ್ ತಿನ್ನುವ ರುಚಿ ಸವಿದವರಿಗೇ ಗೊತ್ತು. ಹೀಗೆ ಫೀಲ್ ಮಾಡ್ತಿರುವ ಫೋಟೋವನ್ನೇ ಅವರು ಶೇರ್ ಮಾಡಿದ್ದಾರೆ. “ಫಾರೆವರ್ ಬಟಾಟವಡಾ ಗರ್ಲ್” ಎಂದು ಹೇಳಿಕೊಂಡಿದ್ದಾರೆ. 50 ವರ್ಷ ದಾಟಿದ್ರೂ ಶಿಲ್ಪಾ ಸಣ್ಣಗಿನ ದೇಹಸೌಂದರ್ಯ ಕಾಪಾಡಿಕೊಂಡ ಎವರ್‍ಗ್ರೀನ್ ಚೆಲುವೆ ಜೊತೆಗೆ ಫಿಟ್ನೆಸ್ ಫ್ರೀಕ್.
ಹೀಗಿರಿವಾಗ ನೀವು `ಯಾವಾಗಲೂ ಓವರ್ ಆ್ಯಕ್ಟಿಂಗ್’, ನೆಟ್ಟಿಗರನ್ನ ಯಾಮಾರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಬರೀ ಪೋಸ್ ಕೊಟ್ರಾ ಅಥವಾ ನಿಜವಾಗಲೂ ತಿಂದ್ರಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ ಫಾಲೋವರ್ಸ್. ಒಟ್ನಲ್ಲಿ ಶಿಲ್ಪಾ ಶೆಟ್ಟಿ ವಡಾಪಾವ್ ತಿಂದ್ರೋ ಬಿಟ್ರೋ ಆದರೆ ಹಾಕಿರುವ ಪೋಸ್ಟ್ ನೋಡುತ್ತಿದ್ದರೆ ವಡಾಪಾವ್ ತಿನ್ನುವ ಆಸೆಯಾಗೋದು ಗ್ಯಾರಂಟಿ. ಇದನ್ನೂ ಓದಿ: 700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ