ಬಿಹಾರ ಚುನಾವಣೆಯಲ್ಲಿ 17 ಹೊಸ ಉಪಕ್ರಮ ಅಳವಡಿಸಿಕೊಂಡ ಚುನಾವಣಾ ಆಯೋಗ; ದೇಶದೆಲ್ಲೆಡೆ ಜಾರಿ

Public TV
2 Min Read

ಪಾಟ್ನಾ: ಬಿಹಾರ ಚುನಾವಣೆಗೆ (Bihar Polls) ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗವು (Election Commission) ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ 17 ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar), 17 ಹೊಸ ಉಪಕ್ರಮಗಳನ್ನು ದೇಶಾದ್ಯಂತ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

ಮತದಾರರ ಪಟ್ಟಿ ಶುದ್ಧೀಕರಣ, ಬೂತ್ ಮಟ್ಟದ ಅಧಿಕಾರಿಗಳ ಗೌರವಧನ ದ್ವಿಗುಣಗೊಳಿಸುವುದು, ಮೊಬೈಲ್ ಫೋನ್ ಕೌಂಟರ್‌, ಹೆಚ್ಚುವರಿ ಬೂತ್‌ಗಳು, ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳು ಮತ್ತು ಪ್ರತಿ ಬೂತ್‌ನಲ್ಲಿ ಶೇಕಡಾ ನೂರರಷ್ಟು ವೆಬ್‌ಕಾಸ್ಟಿಂಗ್ ಸೇರಿವೆ. ಇನ್ನು ನವೆಂಬರ್ 22ರ ಒಳಗೆ ಬಿಹಾರ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿಯಲಿದೆ ಎಂದಿದ್ದಾರೆ. ಬಿಹಾರದ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವಂತೆ ಮತ್ತು ಛತ್‌ ಪೂಜಾ ಹಬ್ಬವನ್ನು ಆಚರಿಸುವಂತೆಯೇ ಚುನಾವಣಾ ದಿನವನ್ನು ಆಚರಿಸುವಂತೆ ಕರೆ ಕೊಟ್ಟರು. ಇದನ್ನೂ ಓದಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ನಲ್ಲಿ ಅಲೆಯಬ್ಬರಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ

ಬಿಹಾರ ಸೇರಿದಂತೆ ದೇಶಾದ್ಯಂತದ 7,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಮೇಲ್ವಿಚಾರಕರಿಗೆ ದೆಹಲಿಯ IIIDEM ನಲ್ಲಿ ತರಬೇತಿ ನೀಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು, ಮತದಾನ/ಮತ ಎಣಿಕೆ ಸಿಬ್ಬಂದಿ, CAPF, ಮೇಲ್ವಿಚಾರಣಾ ತಂಡಗಳು ಮತ್ತು ಸೂಕ್ಷ್ಮ ವೀಕ್ಷಕರಿಗೆ ನೀಡುವ ಗೌರವಧನವನ್ನು ದ್ವಿಗುಣಗೊಳಿಸಲಾಗಿದೆ. ಮೊದಲ ಬಾರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಗೌರವಧನ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅವರಿಗೆ ನೀಡುವ ಉಪಹಾರದ ವ್ಯವಸ್ಥೆಯನ್ನೂ ಹೆಚ್ಚಿಸಲಾಗಿದೆ.

ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ
EVM ಮತಪತ್ರಗಳನ್ನು ಹೆಚ್ಚು ಸ್ಪಷ್ಟವಾಗಿ ಓದಲು ಸಾಧ್ಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಇದೇ ಮೊದಲ ಬಾರಿಗೆ EVM ಗಳಲ್ಲಿ ಅಭ್ಯರ್ಥಿಗಳ ಬಣ್ಣದ ಛಾಯಾಚಿತ್ರಗಳನ್ನು ಅಳವಡಿಸಲಾಗುವುದು ಎಂದು ಸಿಇಸಿ ತಿಳಿಸಿದರು. “ಬಿಹಾರ ಚುನಾವಣೆಗಳಲ್ಲಿ ಪ್ರತಿ ಬೂತ್‌ನಲ್ಲಿ 100% ರಷ್ಟು ವೆಬ್‌ಕಾಸ್ಟಿಂಗ್ ನಡೆಸಲಾಗುವುದು ಎಂದು ಅವರು ವಿವರಿಸಿದರು. ಬಹುನಿರೀಕ್ಷಿತ ಬಿಹಾರ ಚುನಾವಣೆಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ನವೆಂಬರ್‌ನಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.

ಅಂದ್ಹಾಗೆ ಬಿಹಾರದಲ್ಲಿ ಒಟ್ಟು ಮತದಾರರು 7.42 ಕೋಟಿ ಇದ್ದು, 3.66 ಲಕ್ಷ ಮತದಾರರನ್ನ ಡಿಲಿಟ್ ಮಾಡಲಾಗಿದೆ. 21.53 ಲಕ್ಷ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಮತದಾರ ಪರಿಷ್ಕರಣೆ ಬಗ್ಗೆ ರಾಜಕೀಯ ಪಕ್ಷಗಳು ಆಕ್ಷೇಪ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಹಾಗೇನೆ ಆಧಾರ್ ಕಾರ್ಡ್, ಜನ್ಮ ದಿನಾಂಕ ಅಥವಾ ಪೌರತ್ವಕ್ಕೆ ಪ್ರೂಫ್ ಅಲ್ಲ ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

Share This Article