ಸಾಲು ಸಾಲು ರಜೆ ಮುಗಿಸಿ ಬೆಂಗ್ಳೂರಿಗೆ ವಾಪಸ್‌ ಆಗ್ತಿರೋ ಜನ – ನೆಲಮಂಗಲದಲ್ಲಿ ಭಾರೀ ಟ್ರಾಫಿಕ್ ಜಾಮ್

Public TV
1 Min Read

ನೆಲಮಂಗಲ: ದಸರಾ ಹಬ್ಬಕ್ಕೆ ಸಾಲು ಸಾಲು ರಜೆ ಇದ್ದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಹಾಗೂ ಸ್ವಂತ ಊರುಗಳಿಗೆ ತೆರಳಿದ್ದವರು ಬೆಂಗಳೂರಿಗೆ (Bengaluru) ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ನಗರದ ಬಳಿ ಭಾರೀ ಟ್ರಾಫಿಕ್ ಜಾಮ್  (Traffic Jam) ಉಂಟಾಗಿದೆ.

ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಭಾರಿ ವಾಹನ ದಟ್ಟಣೆ ಹೆಚ್ಚಾಗಿದ್ದು ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದಾರೆ. ಇನ್ನೂ ಭಾರೀ ವಾಹನ ದಟ್ಟಣೆ ಹಿನ್ನಲೆಯಲ್ಲಿ ಸಂಚಾರ ಸುಗಮಗೊಳಿಸಲು ನೆಲಮಂಗಲ ಸಂಚಾರಿ ಪೊಲೀಸರು ಹರಸಾಹಸವನ್ನು ಪಡುತ್ತಿದ್ದಾರೆ.‌ ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ – ಕ್ರೌರ್ಯತೆ ನೆನೆದು ಪಿಎಸ್ಐ ಕಣ್ಣಿರು

ರಾಜ್ಯದ ಮೂಲೆ ಮೂಲೆಗಳಿಂದ ಜನರು ಬೆಂಗಳೂರು ನಗರದ ಕಡೆ ಮುಖ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್‌ ಆಗಿ ಸವಾರರಿಗೆ ಸಮಸ್ಯೆ ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಂಚರ್ ಮಾಫಿಯಾ| ನಾಗಸಂದ್ರ – ಗೊರಗುಂಟೆಪಾಳ್ಯ ರಸ್ತೆಯಲ್ಲಿ ರಾಶಿ ರಾಶಿ ಮೊಳೆಗಳು

Share This Article